ಉಮಾದೇವಿ ರಾಯ್ಕರ್
ಭದ್ರಾವತಿ, ನ. ೨೪: ನಗರದ ಬಿ.ಎಚ್ ರಸ್ತೆ, ಹಾಲಪ್ಪ ವೃತ್ತ ರಾಯ್ಕರ್ ಜ್ಯೂಯಲರ‍್ಸ್ ಮಾಲೀಕ ಅರವಿಂದ ರಾಯ್ಕರ್ ಅವರ ತಾಯಿ ಉಮಾದೇವಿ ರಾಯ್ಕರ್(೮೭)ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದರು.
ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸಂಜೆ ಹುತ್ತಾಕಾಲೂನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಉಮಾದೇವಿ ರಾಯ್ಕರ್ ನಿಧನಕ್ಕೆ ವರ್ತಕರು, ವ್ಯಾಪಾರಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.