ಭದ್ರಾವತಿ ನ್ಯೂಟೌನ್ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವೆಂಕಟೇಶ್ ಆವರಿಗೆ ಕರುನಾಡು ಪದ್ಮಶ್ರೀ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಭದ್ರಾವತಿ, ಜೂ. ೭ : ನಗರದ ನ್ಯೂಟೌನ್ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವೆಂಕಟೇಶ್ ಆವರಿಗೆ ಕರುನಾಡು ಪದ್ಮಶ್ರೀ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಶಿವಮೊಗ್ಗ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕರ್ನಾಟಕ ಜಾನಪದ ಕಲಾ ಕೇಂದ್ರ ಕಲ್ಲೇನಹಳ್ಳಿ, ಮಲೆನಾಡು ಜಾನಪದ ಅಂಟಿಕೆ ಪಿಂಟಿಕೆ ಕಲಾಕೇಂದ್ರ, ಮಲೆನಾಡು ನಾಟಿ ಗಿಡಮೂಲಿಕೆ ಸಸ್ಯ ಸಂಜೀವಿನಿ ಸಂಘ ಹಾಗು ಕರ್ನಾಟಕ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ವತಿಯಿಂದ ಸ್ವಾತಂತ್ರೋತ್ಸವದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಜಾನಪದ ಯುವಜನ ಮೇಳ ಸಮ್ಮೇಳನದಲ್ಲಿ ವೆಂಕಟೇಶ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಪತಂಜಲಿ ಯೋಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಿಸರ ಸಿ. ರಮೇಶ್, ಪತಂಜಲಿ ಜಾನಪದ ಕಲಾ ಕೇಂದ್ರದ ಅಧ್ಯಕ್ಷ ಶಿವಾನಂದಪ್ಪ, ಭವಾನಿ ಶಂಕರ್ ರಾವ್, ಪತಂಜಲಿ ಜೆ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಅವರಿಗೆ ನಗರದ ವಿವಿಧ ಗಣ್ಯರು ಅಭಿನಂದಿಸಿದ್ದಾರೆ.