ದೀಪಾವಳಿ ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ಜಾನಪದ ಪರಿಷತ್ತು ಭದ್ರಾವತಿ ತಾಲೂಕು ಖಾಖೆ ವತಿಯಿಂದ ಅಂಟಿಗೆ ಪಂಟಿಗೆ ಕಾರ್ಯಕ್ರಮ ನಡೆಯಿತು.
ಭದ್ರಾವತಿ: ದೀಪಾವಳಿ ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಖಾಖೆ ವತಿಯಿಂದ ಅಂಟಿಗೆ ಪಂಟಿಗೆ ಕಾರ್ಯಕ್ರಮ ನಡೆಯಿತು.
ಮಲೆನಾಡಿನ ಜನಪದ ಕಲೆ, ತೀರ್ಥಹಳ್ಳಿ ತಾಲೂಕಿನ ಹುಲ್ಲತ್ತಿಯ ಅಂಟಿಗೆ ಪಂಟಿಗೆ ತಂಡ ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿತು. ಕಾಗದನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಚಾಲನೆ ನೀಡಿದರು.
ಅಂಟಿಗೆ ಪಂಟಿಗೆ ತಂಡ ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು. ನಗರದ ವಿವಿಧ ಮನೆಗಳಿಗೆ ಭೇಟಿ ನೀಡಿ ಕಲೆ ಅನಾವರಣಗೊಳಿಸುವ ಮೂಲಕ ಜಾನಪದ ಕಲೆಯ ಮಹತ್ವ ತಿಳಿಸಿತು.
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಪ್ರಮುಖರಾದ ಎಂ.ಎಂ ಸ್ವಾಮಿ, ಡಿ. ಗಣೇಶ್, ಪಿ.ಕೆ ಸತೀಶ್, ಮೋಹನ್, ಎಚ್. ತಿಮ್ಮಪ್ಪ, ನಾಗೋಜಿರಾವ್, ಕಮಲಾಕರ್, ಪ್ರಕಾಶ್, ಚಕ್ರಸಾಲಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment