ಕಾರ್ಮಿಕ ಸಚಿವರಿಗೆ ಶಾಸಕ ಸಂಗಮೇಶ್ವರ್ ಮನವಿ
ಬಿ.ಕೆ ಸಂಗಮೇಶ್ವರ್
ಭದ್ರಾವತಿ: ಕಾರ್ಮಿಕರ ವಿಮಾ ಚಿಕಿತ್ಸಾಯಕ್ಕೆ ಸರ್ಕಾರಿ ಕಟ್ಟಡ ಮತ್ತು ವಸತಿ ಗೃಹ ನಿರ್ಮಿಸಿಕೊಡಲು ರು. ೧೦ ಕೋ. ಅನುದಾನ ಬಿಡುಗಡೆಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಮಿಕ ಸಚಿವ ಸಂತೋಷ್ ಲಾಡ್‌ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಸುಮಾರು ೨೫ ವರ್ಷಗಳಿಂದ ಕಾರ್ಮಿಕರ ವಿಮಾ ಚಿಕಿತ್ಸಾಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಕ್ಷೇತ್ರದಲ್ಲಿ ಸುಮಾರು ೨೦ ಸಾವಿರ ಎಂ.ಆರ್.ಇ ಕಾರ್ಡ್‌ಗಳು ಇದ್ದು, ವಿಮಾದಾರರು ಹಾಗು ಅವರ ಅವಲಂಬಿತರು ಸೇರಿದಂತೆ ಸುಮಾರು ೬೦ ಸಾವಿರ ವಿಮಾರೋಗಿಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿಶಾಲವಾದ ಸರ್ಕಾರಿ ಕಟ್ಟಡ ಹಾಗು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಿಸಿಕೊಡುವುದು ಅವಶ್ಯಕವಾಗಿದೆ.
ಈ ಹಿನ್ನಲೆಯಲ್ಲಿ ಅಗತ್ಯವಿರುವ ಸುಮಾರು ರು. ೧೦ ಕೋ. ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾರ್ಮಿಕರ ಹಿತ ಕಾಪಾಡುವಂತೆ ಮನವಿಯಲ್ಲಿ ಕೋರಿದ್ದಾರೆ.
No comments:
Post a Comment