ಭದ್ರಾವತಿ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
ಭದ್ರಾವತಿ: ನಗರದ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
ಕಳೆದ ೨ ವರ್ಷಗಳಿಂದ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ವತಿಯಿಂದ ನೆರವು ನೀಡುತ್ತಿದ್ದು, ಈ ಬಾರಿ ಸಹ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಈ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ.
ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಲಿಮಿಟೆಡ್ ಲೆಕ್ಕ ಪರಿಶೋಧನೆ ವಿಭಾಗದ ವ್ಯವಸ್ಥಾಪಕ ಶಾಬಾಸ್ ಖಾನ್, ಮಾರುಕಟ್ಟೆ ವ್ಯವಸ್ಥಾಪಕ ವಸಂತ ವಿಭಾಗೀಯ ವ್ಯವಸ್ಥಾಪಕ ಸುಂದರೇಶ್, ಸಿಬ್ಬಂದಿಗಳಾದ ಅಫ್ಜಲ್ ಬೇಗ್, ಅಕ್ಷಿತಾ, ಕಾವ್ಯ ಮತ್ತು ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment