ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವೀಕ್ಷಣೆಗೆ ಆಗಮಿಸಿರುವ ಚಿತ್ರ ನಟ ದರ್ಶನ್ ನೇತೃತ್ವದ ತಂಡ.
ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವೀಕ್ಷಣೆಗೆ ಆಗಮಿಸಿದ ಚಿತ ನಟ ದರ್ಶನ್‌ಗೆ ಸ್ಥಳೀಯ ಮಹಿಳೆಯೊಬ್ಬರು ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು.
ಭದ್ರಾವತಿ, ಆ. ೮: ತಾಲೂಕಿನ ಭದ್ರಾ ಆಭಯಾರಣ್ಯ ವೀಕ್ಷಣೆಗೆ ನಟ ದರ್ಶನ್ ನೇತೃತ್ವದ ತಂಡ ಆಗಮಿಸಿದ್ದು, ಬಿಆರ್‌ಪಿ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದೆ.
ಕೆಲವು ದಿನಗಳ ಹಿಂದೆ ದರ್ಶನ್ ನೇತೃತ್ವದ ತಂಡ ಶ್ರೀ ಮಹಾದೇಶ್ವರ ಬೆಟ್ಟದ ದಟ್ಟಾರಣ್ಯದಲ್ಲಿ ವೀಕ್ಷಣೆ ನಡೆಸಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಿಸಿತ್ತು. ಇದೀಗ ೨ ದಿನಗಳ ಕಾಲ ಅರಣ್ಯ ವೀಕ್ಷಣೆಗೆ ಆಗಮಿಸಿದ್ದು, ಕಾಡಿನ ವ್ಯನ್ಯಜೀವಿಗಳ ಕುರಿತು ಹೆಚ್ಚಿನ ಕಾಳಜಿ ಹೊಂದಿರುವ ದರ್ಶನ್ ಛಾಯಾಗ್ರಹಣದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದು, ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಭದ್ರಾ ಅಭಯಾರಣ್ಯ ಪ್ರವೇಶಿಸಿದ ತಂಡ ರಾತ್ರಿ ಹಿಂದಿರುಗಿದೆ. ಭಾನುವಾರ ಸಹ ಅರಣ್ಯ ವೀಕ್ಷಣೆ ನಡೆಸಿ ಸಂಜೆ ತೆರಳಿಲಿದೆ.
ಭದ್ರಾ ಜಲಾಶಯ ವೀಕ್ಷಣೆ:
ದರ್ಶನ್ ನೇತೃತ್ವದ ತಂಡ ಮೈತುಂಬಿಕೊಂಡಿರುವ ಭದ್ರಾ ಜಲಾಶಯದ ವೀಕ್ಷಣೆ ಸಹ ನಡೆಸಿ ಪ್ರಕೃತಿ ಸೌಂದರ್ಯವನ್ನು ಕಂಡು ವಿಸ್ಮಯಗೊಂಡಿದೆ.
ಅಭಿಮಾನಿಗಳ ದಂಡು:
ನಟ ದರ್ಶನ್ ಬಂದಿರುವ ಮಾಹಿತಿ ತಿಳಿದು ಅವರ ಅಭಿಮಾನಿಗಳ ದಂಡು ವಾಸ್ತವ್ಯ ಹೂಡಿರುವ ಅತಿಥಿ ಗೃಹಕ್ಕೆ ಭೇಟಿ ನೀಡಿದ್ದು, ಆದರೆ ಪೊಲೀಸರು ಅಭಿಮಾನಿಗಳ ಭೇಟಿಗೆ ಹೆಚ್ಚಿನ ಅವಕಾಶ ಕೊಡಲಿಲ್ಲ. ಈ ನಡುವೆ ಸ್ಥಳೀಯ ಮಹಿಳೆಯೊಬ್ಬರು ದರ್ಶನ್ ಅವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು.
ದರ್ಶನ್ ನೇತೃತ್ವದ ತಂಡದಲ್ಲಿ ಹಾಸ್ಯ ನಟ ಚಿಕ್ಕಣ್ಣ ಸಹ ಇದ್ದು, ತಂಡಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ವ್ಯನ್ಯ ಜೀವಿ ಸಲಹಾ ಸಮಿತಿ ಸದಸ್ಯ ಸ್ವರೂಪ್ ಜೈನ್ ಸಹ ಮಾರ್ಗದರ್ಶನ ನೀಡಿದರು.
No comments:
Post a Comment