ಭದ್ರಾವತಿ ಜನ್ನಾಪುರದಲ್ಲಿ ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಭದ್ರಾವತಿ: ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ರಕ್ಷಿಸುವಲ್ಲಿ ಇಲ್ಲಿನ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಶುಕ್ರವಾರ ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ ಎಮ್ಮೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದು, ಸುಮಾರು ಸಂಜೆ ೪.೧೪ರ ಸಮಯದಲ್ಲಿ ಅಗ್ನಿಶಾಮಕ ಠಾಣೆ ಈ ಸಂಬಂಧ ಕರೆ ಮಾಡಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಠಾಣೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸುಮಾರು ೧ ಗಂಟೆ ಸಮಯ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಆನಂದ, ಸುರೇಶ್, ರಾಜಾನಾಯ್ಕ, ಸಂತೋಷ್ ಮತ್ತು ಸಿದ್ದಪ್ಪ ಹಾಗು ಪೌರಕಾರ್ಮಿಕರು ಪಾಲ್ಗೊಂಡಿದ್ದರು.
No comments:
Post a Comment