Tuesday, September 1, 2020

ಯುವ ಕಾರ್ಯಕರ್ತರು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ : ಎಂ.ಜೆ ಅಪ್ಪಾಜಿ

ಭದ್ರಾವತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತೊರೆದು ವಿದ್ಯಾರ್ಥಿ ಜನತಾದಳ ಅಧ್ಯಕ್ಷರ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ೫೦ಕ್ಕೂ ಹೆಚ್ಚು ಮಂದಿ ಯುವಕರು ಸೇರ್ಪಡೆಗೊಂಡರು.  
ಭದ್ರಾವತಿ, ಸೆ. ೧: ರಾಜಕಾರಣಕ್ಕೆ ಬರಲು ಬಯಸುವ ಯುವ ಸಮುದಾಯ ಮೊದಲು ಕುಟುಂಬಕ್ಕಾಗಿ ಶ್ರಮಿಸಬೇಕು. ನಂತರ ರಾಜಕಾರಣದ ಮೂಲಕ ಜನರ ಸೇವೆ ಮಾಡಬೇಕೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೇಳಿದರು.
     ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತೊರೆದು ವಿದ್ಯಾರ್ಥಿ ಜನತಾದಳ ಅಧ್ಯಕ್ಷರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ೫೦ಕ್ಕೂ ಹೆಚ್ಚು ಮಂದಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
    ಪಕ್ಷಕ್ಕೆ ಸೇರ್ಪಡೆಗೊಂಡವರು ಪ್ರಸ್ತುತ ಸವಾಲಾಗಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಶ್ರಮಿಸಬೇಕು. ಮುಂದಿನ ೨-೩ ತಿಂಗಳ ನಂತರ ಪಕ್ಷ ಸಂಘಟನೆಗೆ ಮುಂದಾಗಬೇಕು. ವಾರ್ಡ್ ಮಟ್ಟದಲ್ಲಿನ ಸಮಸ್ಯೆಗಳನ್ನು ಸಾಧ್ಯವಾದಷ್ಟು ತಾವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಅಸಾಧ್ಯವಾದಲ್ಲಿ ಪಕ್ಷದ ಹಿರಿಯ ಗಮನಕ್ಕೆ ತರವುದು ಸಲಹೆ ನೀಡಿದರು.
     ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಯುವ ಜನಾತದಳ ಅಧ್ಯಕ್ಷ ಕೃಷ್ಣರಾಜ್, ವಿದ್ಯಾರ್ಥಿ ಜನತಾದಳ ಅಧ್ಯಕ್ಷ ಗಗನ್‌ಗೌಡ, ಮುಖಂಡರಾದ ಬಿ.ಆರ್ ಯೋಗೇಶ್, ಉಮೇಶ್, ಅನಂತ್, ಚಿರಾಗ್, ಕುಶಾಲ್ ಗೌಡ, ಗೌತಮ್, ಸೋಮಶೇಖರ್, ಕಿರಣ್, ಸುಶೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment