ಭದ್ರಾವತಿ ನ್ಯೂಟೌನ್ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ, ಜು. ೨೬: ಅಣಬೆ ಸಸ್ಯಹಾರಿಯಾಗಿದ್ದು, ಕಡಿಮೆ ಜಾಗದಲ್ಲಿ ಅಧಿಕ ಲಾಭಗಳಿಸುವ ಬೆಳೆಯಾಗಿದೆ. ಅಲ್ಲದೆ ಅಣಬೆ ಬೆಳೆಯಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್ ಹೇಳಿದರು.
ಅವರು ನ್ಯೂಟೌನ್ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಅಣಬೆಯಲ್ಲಿ ವಿಟಮಿನ್ ಬಿ ಪ್ರೋಟೀನ್ ಹೇರಳವಾಗಿದ್ದು, ವಯಸ್ಕರಿಗೂ, ಗರ್ಭಿಣಿಯರಿಗೂ, ಮಕ್ಕಳಿಗೂ, ಸಕ್ಕರೆ ಕಾಯಿಲೆಯವರಿಗೆ ದೇಹ ಕರಗಿಸಲು ಸೂಕ್ತವಾಗಿದೆ. ಇದು ಮಾಂಸಾಹಾರಿ ಎಂಬ ತಪ್ಪು ಕಲ್ಪನೆ ಇದ್ದು, ಅಣಬೆ ಸಸ್ಯಹಾರಿಯಾಗಿದೆ. ಅಣಬೆ ಬೆಳೆಯುವುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಹೆಲೆನ್ ಮೊರಸ್, ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕಾರ್ಯಕರ್ತರಾದ ಗ್ರೇಸಿ, ವಿನ್ನಿ, ಧನಲಕ್ಷ್ಮಿ ಸೇರಿದಂತೆ ಸುಮಾರು 150 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
No comments:
Post a Comment