ಭದ್ರಾವತಿ: ಬೆಂಗಳೂರು ಬನ್ನೇರಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಹಾಗೂ ನಗರದ ತರೀಕೆರೆ ರಸ್ತೆಯ ಮೀನಾ ನರ್ಸಿಂಗ್ ಹೋಮ್ ಸಹಯೋಗದಲ್ಲಿ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ ಜ.೮ ರಂದು ಮಧ್ಯಾಹ್ನ ೩ ಗಂಟೆಯಿಂದ ೪ ಗಂಟೆಯವರೆಗೆ ಮೀನಾ ನರ್ಸಿಂಗ್ ಹೋಮ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು, ನಡೆಯಲು ಕಷ್ಟವಾಗುವಿಕೆ ಲಕ್ಷಣ ಉಳ್ಳವರು ಹಾಗೂ ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ ಹಾಗೂ ಕೀಹೋಲ್ ಮೂಳೆ ಚಿಕಿತ್ಸೆಯ ಕಾರ್ಯಾಚರಣೆಗಳು ಹಾಗು ಫೋರ್ಟಿಸ್ ಆಸ್ಪತ್ರೆಯ ರೋಬೋಟಿಕ್ ಕೀಲು ಮತ್ತು ಮಂಡಿ ಮರುಜೋಡಣೆಯ ತಜ್ಞರಾದ ಡಾ. ಮೋಹನ್ ಕೆ. ಪುಟ್ಟಸ್ವಾಮಿ ಅವರಿಂದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ನಡೆಯಲಿದೆ.
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗೆ ಸಂತೋಷ್ ಚೌಹಾಣ್ : ೯೪೪೯೬೯೬೯೫೪ / ೮೦೮೮೯೭೩೪೯೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
No comments:
Post a Comment