ಭದ್ರಾವತಿ: ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು ಹಾಗು ಬೆಲೆ ಬಾಳುವ ಮದ್ಯ ದರೋಡೆ ಮಾಡಿರುವ ಘಟನೆ ತಾಲೂಕಿನ ಬಾರಂದೂರು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ವಿನೋಬನಗರ ನಿವಾಸಿ ಎಚ್.ಆರ್ ಪಂದೇಶ್ ಬಾರಂದೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವೈನ್ ಶಾಪ್ ಮಾಲೀಕರಾಗಿದ್ದು, ವೈನ್ ಶಾಪ್ ಕ್ಯಾಷಿಯರ್ ಸಚಿನ್ ಮಾ.೧೬ರಂದು ದಿನದ ವ್ಯಾಪಾರ ಮುಗಿಸಿಕೊಂಡು ರಾತ್ರಿ ೧೦.೨೦ರ ಸಮಯದಲ್ಲಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ವೈನ್‌ಶಾಪ್‌ಗೆ ಹೊಂದಿಕೊಂಡಂತೆ ಇರುವ ರೆಸ್ಟ್ ರೂಂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ರೆಸ್ಟ್ ರೂಂ ಒಳಗಿನ ಗೋಡೆ ಒಬ್ಬ ವ್ಯಕ್ತಿ ಒಳಗೆ ನುಸುಳ ಬಹುದಾದಷ್ಟು ದೊಡ್ಡದಾದ ಕನ್ನ ಕೊರೆದು ದರೋಡೆ ಮಾಡಿರುವುದು ಕಂಡು ಬಂದಿರುತ್ತದೆ.
ಬ್ಯಾಂಕ್ ಖಾತೆಗೆ ಜಮಾ ಮಾಡಲು ಇಡಲಾಗಿದ್ದ ೧,೦೦,೦೦೦ ರು. ನಗದು ಹಣ ಮತ್ತು ಮಾ. ೧೫ ಹಾಗು ೧೬ ಶನಿವಾರ ಮತ್ತು ಭಾನುವಾರ ಎರಡು ದಿನದ ವ್ಯಾಪಾರದ ಹಣ ೨,೫೬,೫೦೦ ರು. ಮತ್ತು ವೈನ್ ಶಾಪ್ ಕ್ಯಾಶ್ ಡ್ರಾನಲ್ಲಿದ್ದ ಚಿಲ್ಲರೆ ಹಣ ಒಟ್ಟು ೪,೦೦೦g ರು. ಹಾಗೂ ವೈನ್ ಶಾಪ್ ಶೋಕೇಸ್‌ನಲ್ಲಿದ್ದ ಬ್ಲಾಕ್ & ವ್ಹೈಟ್ ೧೮೦ ಎಂ.ಎಲ್ ಒಟ್ಟು ಸುಮಾರು ೪೬೮೦ ರು. ಮೌಲ್ಯದ ೮ ಬಾಟಲ್‌ಗಳು ಮತ್ತು ವೋಡ್ಕಾ ೧೮೦ ಎಂ.ಎಲ್ ಒಟ್ಟು ಸುಮಾರು ೮೯೦ ರು. ಮೌಲ್ಯದ ೨ ಕ್ವಾಟರ್‌ಗಳನ್ನು ಕಳವು ಮಾಡಲಾಗಿದೆ. ಒಟ್ಟು ನಗದು ಹಣ ೩,೬೦,೫೦೦ ರು. ಮತ್ತು ೫೫೭೦ ರು. ಬೆಲೆಬಾಳುವ ಮಧ್ಯದ ಬಾಟಲ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment