ಪ್ರತಿವರ್ಷ ವಿಕಲಚೇತನರು, ವಯೋವೃದ್ಧರು, ಅನಾಥರು, ಅಶಕ್ತರೊಂದಿಗೆ ಹುಟ್ಟುಹಬ್ಬ ಆಚರಣೆ
ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ತಮ್ಮ ಹುಟ್ಟುಹಬ್ಬವನ್ನು ಭದ್ರಾವತಿಯಲ್ಲಿ ಕಾರುಣ್ಯ ಚಾರಿಟಬಲ್ ಟ್ರಸ್ಟ್ನ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡರು.
ಭದ್ರಾವತಿ, ಡಿ. ೧೧: ಹುಟ್ಟುಹಬ್ಬದ ಆಚರಣೆ ಮೂಲಕ ಸಂಘಟನೆ ಬಲಪಡಿಸುವ ವಿನೂತನ ಪ್ರಯತ್ನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರತಿ ವರ್ಷ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ಹಾಗು ಅನಾಥರು, ವಯೋವೃದ್ಧರು ಮತ್ತು ಅಶಕ್ತರೊಂದಿಗೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಬಾರಿ ಸಹ ಕಾರುಣ್ಯ ಚಾರಿಟಬಲ್ ಟ್ರಸ್ಟ್ನ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಅಲ್ಲದೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ರವರ ಹುಟ್ಟುಹಬ್ಬದ ಜೊತೆ ಹಂಚಿಕೊಂಡರು. ಇದು ವೇದಿಕೆಯ ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಮತ್ತಷ್ಟು ಸಂಘಟಿಸಲು ಕಾರಣವಾಗಿದೆ. ಎಲ್ಲರ ಹುಟ್ಟುಹಬ್ಬ ಸಹ ಈ ನಿಟ್ಟಿನಲ್ಲಿಯೇ ಸಾಗಬೇಕೆಂಬ ಆಶಯ ವೇದಿಕೆ ಹೊಂದಿದೆ ಎಂಬ ಸಂದೇಶ ಜ್ಯೋತಿ ಸೋಮಶೇಖರ್ ತೋರಿಸಿ ಕೊಟ್ಟಿದ್ದಾರೆ.
ವೇದಿಕೆ ಗೌರವಾಧ್ಯಕ್ಷ ನಾಗೇಂದ್ರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ಶಿವಾಮೋಗ್ಗ ಯುವಘಟಕ ಅದ್ಯಕ್ಷ ಶಾಜಿದ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಶಶಾಂಕ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಜಯಂತಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ, ಪ್ರೀತಿ ಪ್ರಶಾಂತ್, ಐಶ್ವರ್ಯ, ಪ್ರಶಾಂತ್, ಶಿವಮೊಗ್ಗ ತಾಲೂಕು ಮಹಿಳಾ ಅಧ್ಯಕ್ಷೆ ಗಂಗಾವತಿ, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ. ನಾಗರತ್ನ, ಕಾಂತಾ, ಮಂಜುಳಾ, ಸುಮಿತ್ರಾ, ಗೀತಾ, ವಾಣಿ, ಯಾಸ್ಮಿನ್, ಪ್ರೇಮ ಮತ್ತು ಶ್ರಾವ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.