ಪತ್ರಕರ್ತ ಸುರೇಶ್ ಸಾಧನೆ
ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ.

ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಸುಮಾರು ೨ ಎಕರೆ ಜಮೀನು ಹೊಂದಿರುವ ಸುರೇಶ್‌ರವರು ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಸೊಪ್ಪು ಮತ್ತು ಅಣಬೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಉತ್ತಮ ಇಳಿವರಿ ಪಡೆಯುವ ಮೂಲಕ ಪ್ರಗತಿ ಸಾಧಿಸಿದ್ದಾರೆ.
ಅಲ್ಲದೆ ಹಸು, ಕುರಿ ಮತ್ತು ಕೋಳಿ ಸಾಕಾಣಿಕೆ ಮೂಲಕ ಹೈನುಗಾರಿಕೆಯಲ್ಲೂ ಪ್ರಗತಿ ಸಾಧಿಸಿದ್ದು, ತೋಟಗಾರಿಕೆ ಬೆಳೆ ಹಾಗು ಹೈನುಗಾರಿಕೆ ಇವರ ಬದುಕಿಗೆ ಆಧಾರ ಸ್ತಂಭಗಳಾಗಿವೆ.
ಸುರೇಶ್‌ರವರ ಸಾಧನೆಯನ್ನು ಗುರುತಿಸಿ ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಅಭಿನಂದಿಸಿದೆ.