Saturday, December 21, 2024

೧೧ ವರ್ಷಗಳಿಂದ ತಲೆಮರೆಸಿಕೊಂಡಿದ್‌ದ ಕನ್ವಿಕ್ಷನ್ ವಾರೆಂಟ್ ಆರೋಪಿ ಬಂಧನ

ಕಳೆದ ಸುಮಾರು ೧೧ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕನ್ವಿಕ್ಷನ್ ವಾರೆಂಟ್ ಆರೋಪಿಯೊಬ್ಬನನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ಕಳೆದ ಸುಮಾರು ೧೧ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕನ್ವಿಕ್ಷನ್ ವಾರೆಂಟ್ ಆರೋಪಿಯೊಬ್ಬನನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ೨೦೧೧ನೇ ಸಾಲಿನ ಹಳೇನಗರ ಠಾಣೆಯ ಕಲಂ ೩೨೬ ಐಪಿಸಿ ಪ್ರಕರಣದಲ್ಲಿ ೨ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಪೆರುಮಾಳ್‌ಗೆ ೩ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೧೦ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿತ್ತು. ಆದರೆ ಈತ ೧೧ ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯ ಕನ್ವಿಕ್ಷನ್ ವಾರೆಂಟ್ ಹೊರಡಿಸಿತ್ತು. 
    ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ, ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ಚಿನ್ನಾನಾಯ್ಕ ಅವರನ್ನೊಳಗೊಂಡ ತಂಡ ಈತನನ್ನು ತಿಪಟೂರಿನಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

No comments:

Post a Comment