ಗಂಗಪ್ಪ ಹತ್ತಿ
ಭದ್ರಾವತಿ : ನಗರದ ಜನ್ನಾಪುರ ನಿವಾಸಿ ಗಂಗಪ್ಪ ಹತ್ತಿ(60) ಎಂಬುವರು ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಡಿ.9ರಂದು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಯಾರಿಗಾದರೂ ಇವರ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ.
4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಬಣ್ಣ, ಕೋಲುಮುಖ, ಬಿಳಿ ಮತ್ತು ಕಪ್ಪು ಬಣದ ಗಡ್ಡ ಹೊಂದಿರುತ್ತಾರೆ. ಕಾಣೆಯಾದಾಗ ತಲೆಯಲ್ಲಿ ಕೆಂಪು ಟೋಪಿ, ಬ್ರೌನ್ ಕಲರ್ ಶರ್ಟ್, ಗ್ರೇ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಮಾತನಾಡಲು ಬರುವುದಿಲ್ಲ. ಕೈ ಸನ್ನೆ ಮಾಡುತ್ತಾರೆ.
ಡಿ.6ರಂದು ಯಾರಿಗೂ ಹೇಳದೆ ಗಂಗಪ್ಪ ಹತ್ತಿ ಅವರು ಮನೆ ಬಿಟ್ಟು ಹಾವೇರಿಗೆ ಸಂಬಂಧಿಕರ ಮನೆಗೆ ಹೋಗಿದ್ದು, ಶಿಕಾರಿಪುರದಲ್ಲಿ ವಾಸವಾಗಿರುವ ಇವರ ಪುತ್ರ ಬಸವರಾಜ ಅವರಿಗೆ ಸಂಬಂಧಿಕರು ಪೋನ್ ಮಾಡಿ ನಿಮ್ಮ ತಂದೆಯವರು ಹಾವೇರಿಯಲ್ಲಿದ್ದು, ಬಂದು ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅದರಂತೆ ಶಿಕಾರಿಪುರದಿಂದ ಭದ್ರಾವತಿ ಕರೆದುಕೊಂಡು ಬರುವಾಗ ಡಿ.9ರಂದು ರಾತ್ರಿ 8 ಗಂಟೆ ಸಮಯದಲ್ಲಿ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆಂದು ಹುಡುಕಿ ಕೊಡುವಂತೆ ಡಿ.21ರಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment