ಭ್ರಷ್ಟಾಚಾರ ಆರೋಪದ ಮೇಲೆ ಭದ್ರಾವತಿ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಡಿ. ೧೩: ಭ್ರಷ್ಟಾಚಾರ ಆರೋಪದ ಮೇಲೆ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.
ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರಾದ ಗಾಯಿತ್ರಿಯವರು ತಮ್ಮ ಬೆರಳಚ್ಚು ಪಾಸ್ವರ್ಡ್ ಲಾಗಿನನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ನೀಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪಡಿತರ ಕೆಲವು ನ್ಯಾಯಬಲೆ ಅಂಗಡಿ ಮಾಲೀಕರ ಜೊತೆ ಶಾಮೀಲಾಗಿ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳ ಪಾಸ್ವರ್ಡ್ ಲಾಗಿನನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಗಾಯತ್ರಿಯವರು ಉದ್ದೇಶಪೂರ್ವಕವಾಗಿ ಸರ್ಕಾರದ ಹಣ ಲೂಟಿ ಮಾಡಿರುತ್ತಾರೆ. ಇವರು ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ನೆಪಮಾತ್ರಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ೭ ನ್ಯಾಯಬೇಲೆ ಅಂಗಡಿಗಳ ಮೇಲೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ ಎಂದು ಆರೋಪಿಸಿದರು.
ಯಾವುದೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ನಡೆಸಿ ರದ್ದಾದರೆ ಈ ವಿಚಾರವನ್ನು ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ನಂತರ ಸಹಕಾರ ಸಂಘಗಳಿಗೆ ನೀಡಬೇಕೆಂದು ಸರ್ಕಾರದ ನಿಯಮವಿದೆ. ಆದರೆ ಭ್ರಷ್ಟ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಜೊತೆ ಗಾಯತ್ರಿಯವರು ಸೇರಿಕೊಂಡು ಯಾವುದೇ ಪ್ರಕಟಣೆ ಹೊರಡಿಸದೆ ತಮಗೆ ಬೇಕಾದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬೇಕಾಬಿಟ್ಟಿ ಅಂಗಡಿ ನಡೆಸಲು ಅನುಮತಿ ನೀಡುತ್ತಿದ್ದು, ಅಲ್ಲದೆ ಭ್ರಷ್ಟಾಚಾರ ನಡೆಸಿ ರದ್ದಾಗಿರುವ ನ್ಯಾಯಬೆಲೆ ಅಂಗಡಿಗಳನ್ನು ಮತ್ತೆ ಮೂಲ ಮಾಲೀಕರೇ ನಡೆಸಲು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಒಟ್ಟಾರೆ ಎಲ್ಲಾ ಭ್ರಷ್ಟಾಚಾರಗಳಿಗೂ ಗಾಯತ್ರಿಯವರು ಮೂಲ ಕಾರಣಕರ್ತರಾಗಿದ್ದು, ಇವರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ, ವೆಂಕಟೇಶ್, ಆನಂದ್, ವಿನೋದ್, ರಾಜೇಂದ್ರ, ಚಂಪಯ್ಯ, ವಾಣಿ, ರೇಖಾ, ಮಧುಕುಮಾರ್, ಆಯಾಜ್, ಯೋಗೇಶ್, ಸಂದೀಪ್, ಬಿ.ಎಸ್ ಮಲ್ಲಿಕಾರ್ಜುನ, ಶರತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.