ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು
ಭದ್ರಾವತಿ, ಡಿ. ೧೨ : ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವ ೧೧ ದಿನಗಳ ಕಾಲ 'ಅಮಲೋದ್ಭವಿ ಮಾತೆಯೊಂದಿಗೆ ಸಾಗು, ಕುಟುಂಬದಲ್ಲಿ ವಿಶ್ವಾಸವ ಸಾರು' ಧ್ಯೇಯವಾಕ್ಯದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಬಲಿಪೂಜೆ ಮತ್ತು ಪ್ರಬೋಧನೆಗಳು ಜರುಗಿದವು. ೧೦ನೇ ದಿನ ಅಮಲೋದ್ಭವಿ ಮಾತೆಯ ಅಲೃಂಕೃತಗೊಂಡ ಭವ್ಯ ತೇರಿನ ಮೆರವಣಿಗೆ ನಡೆಯಿತು. ಧರ್ಮಗುರುಗಳಿಂದ ಆಶೀರ್ವಾದ ಹಾಗು ಅನ್ನಸಂತರ್ಪಣೆ ನೆರವೇರಿತು.
೧೧ನೇ ದಿನ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋರವರು ಸುಮಾರು ೫೦ಕ್ಕೂ ಹೆಚ್ಚು ಧರ್ಮಗುರುಗಳೊಂದಿಗೆ ದಿವ್ಯ ಬಲಿಪೂಜೆ ನೆರವೇರಿಸಿದರು.
ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿಯನ್ನು, ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರು ಶ್ರೇಷ್ಠ ವಂದನೀಯ ಸ್ವಾಮಿ ಎಲಿಯಾಸ್ ಸಿಕ್ವೇರಾರವರನ್ನು, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮತ್ತು ನಗರಸಭಾ ಸದಸ್ಯ ಜಾಜ್‌ರವರನ್ನು ಸನ್ಮಾನಿಸಿ ಗೌರಿವಿಸಲಾಯಿತು.
ದೇವಾಲಯದ ಧರ್ಮಗುರು ವಂದನೀಯ ಸ್ವಾಮಿ ಲಾನ್ಸಿ ಡಿಸೋಜ ವಾರ್ಷಿಕೋತ್ಸವದ ನೇತೃತ್ವ ವಹಿಸಿದ್ದರು. ಸುತ್ತಮುತ್ತಲ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು.
No comments:
Post a Comment