ಭದ್ರಾವತಿ, ಜೂ. ೨೦: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಅರ್ಥಶಾಸ್ತ್ರ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ಎನ್‌ಸಿಸಿ ಘಟಕದ ವತಿಯಿಂದ ರಾಷ್ಟ್ರಮಟ್ಟದ ಇ-ಕ್ವಿಜ್(ರಸ ಪ್ರಶ್ನೆ) ಸ್ಪರ್ಧೆ ಆಯೋಜಿಸಲಾಗಿದೆ.
ಯೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಆನ್‌ಲೈನ್ ಮೂಲಕ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಶೇ.೫೦ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಇ-ಸರ್ಟಿಫಿಕೇಟ್ ಬಹುಮಾನ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಎಂ.ಡಿ ವಿಶ್ವನಾಥ್, ಮೊ: ೯೯೮೬೮೧೭೩೨೪, ಡಾ. ಜಿ.ಆರ್ ರಾಜಶೇಖರ್, ಮೊ: ೯೬೧೧೪೨೨೧೨೨, ಡಾ. ಟಿ. ಪ್ರಸನ್ನ, ಮೊ: ೯೪೮೧೯೮೯೪೯೮ ಅಥವಾ ಪ್ರೊ. ಎನ್.ಯು ಹೆಗ್ಗಡೆ, ಮೊ: ೮೦೭೩೨೧೫೭೯೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಕೋರಿದ್ದಾರೆ.