ರೌಡಿಶೀಟರ್ ಕಡೇಕಲ್ ಆಬಿದ್
ಭದ್ರಾವತಿ : ನಗರದ ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ರೌಡಿಶೀಟರ್ ಶಿವಮೊಗ್ಗ ಕಡೇಕಲ್ ನಿವಾಸಿ ಆಬಿದ್(೩೯) ಕಾಲಿಗೆ ಪೇಪರ್‌ಟೌನ್ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.
ಪೊಲೀಸರು ಹಿಡಿಯಲು ಹೋದಾಗ ಕಾನ್ಸ್‌ಸ್ಟೇಬಲ್ ಅರುಣ್‌ನನ್ನು ಚಾಕಿವಿನಿಂದ ಇರಿದು ಓಡಿ ಹೋಗಲು ಯತ್ನಿಸಿದಾಗ ಠಾಣೆ ನಿರೀಕ್ಷಕಿ ನಾಗಮ್ಮ ಗುಂಡು ಹಾರಿಸಿದ್ದಾರೆ. ಶಿವಮೊಗ್ಗ ರೌಡಿಶೀಟರ್ ಯಾಸಿನ್ ಖುರೇಶಿ ಸಹಚರನಾಗಿರುವ ಈತನು ಇತ್ತೀಚೆಗೆ ಕೊಲೆ ಯತ್ನ ಕೇಸಿನಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದನು. ಈತನ ಬಂಧನಕ್ಕೆ ಪೇಪರ್‌ಟೌನ್ ಠಾಣೆ ಪೊಲೀಸರ ತಂಡ ಬಲೆ ಬೀಸಿತ್ತು.
ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ಈತನನ್ನು ಪತ್ತೆ ಮಾಡಿದ ತಂಡ ಠಾಣೆ ನಿರೀಕ್ಷಕಿ ನಾಗಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈತನನ್ನು ಹಿಡಿದು ಬಂಧಿಸಲು ಮುಂದಾದ ಕಾನ್ಸ್‌ಸ್ಟೇಬಲ್ ಅರುಣ್ ಮತ್ತು ಹನುಮಂತ ಇಬ್ಬರ ಮೇಲೆ ದಾಳಿ ನಡೆಸಿದ್ದು, ಅರುಣ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಿರೀಕ್ಷಕಿ ನಾಗಮ್ಮ ರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. . ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಮೇಲೆ ಕೊಲೆ, ಕೊಲೆ ಯತ್ನ. ರಾಬರಿ ಇನ್ನು ಮುಂತಾದ ೨೦ ಪ್ರಕರಣಗಳಿವೆ.