ಭದ್ರಾವತಿ, ಆ. 19: ಯು.ಜಿ ನೀಟ್ 2023-24ನೇ ಸಾಲಿನ ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಥಮ ಪ್ರಯತ್ನದಲ್ಲಿಯೇ ಪಡೆಯುವಲ್ಲಿ ನಗರದ ಎಚ್.ಎನ್ ರಚನಾ ಯಶಸ್ವಿಯಾಗಿದ್ದಾರೆ.
ಇವರು ಶಿಕ್ಷಕರಾದ ಎಚ್.ಎಸ್ ಮಾಯಮ್ಮಹಾಗೂ ಎಚ್.ಎನ್ ನರಸಿಂಹಮೂರ್ತಿ ದಂಪತಿ ಪುತ್ರಿಯಾಗಿದ್ದಾರೆ. ರಚನಾ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ(ಪಿಯುಸಿ) ಪೂರೈಸಿದ್ದು, ಇದೀಗ ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದುಕೊಂಡಿದ್ದಾರೆ. ರಚನಾ ಅವರನ್ನು ಪೋಷಕರು, ಶಿಕ್ಷಕ ವೃಂದದವರು, ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.
No comments:
Post a Comment