Friday, August 18, 2023

ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು


    ಭದ್ರಾವತಿ, ಆ. ೧೮: ಮನೆಯ ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ಕೋಟೆ ಗಂಗೂರು ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ಎಂ. ಶೀಲಾರವರು ಆ.೧೬ರಂದು  ತಮ್ಮ ಗಂಡನ ಜೊತೆ ಹಾಲು ಮಾರಾಟ ಮಾಡಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು,  ರಾತ್ರಿ ಮನೆಗೆ ಬಂದು ಮನೆಯ ಬೀಗ ತೆಗೆದು ನೋಡಿದಾಗ  ಬೀರುವಿನ ಬಾಗಿಲು ಮುರಿದು ಲಾಕರ್ ನಲ್ಲಿಟ್ಟಿದ್ದ ಸುಮಾರು ೨೯.೫ ಗ್ರಾಂ ತೂಕದ  ಒಟ್ಟು ಸುಮಾರು ೧.೩೦ ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಶೀಲಾರವರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

No comments:

Post a Comment