Friday, August 18, 2023

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರಂದು



ಭದ್ರಾವತಿ, ಆ. 19: ತಾಲೂಕು ಛಾಯಾಗ್ರಾಹಕರ ಸಂಘ ಮತ್ತು ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರ ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ ಹಳೇನಗರದ ಸಂಚಿಯ  ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಿಬಿರದಲ್ಲಿ ಇ.ಸಿ.ಜಿ.ಯೊಂದಿಗೆ ಹೃದಯ, ಕಿಡ್ನಿ, ದಂತ, ಕಣ್ಣು, ಕಿವಿ, ಇ.ಎನ್.ಟಿ, ಮೂಳೆ, ನರರೋಗ, ಚರ್ಮರೋಗ, ಸಕ್ಕರೆ ಖಾಯಿಲೆ, ಮಕ್ಕಳ ಮತ್ತು ಸ್ತ್ರೀಯರ ಖಾಯಿಲೆಗಳು ಹಾಗೂ ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಇತರೆ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ.   
      ರಕ್ತದಾನ ಶಿಬಿರ :
    ಅಲ್ಲದೆ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಿದಂತಹ ದಾನಿಗಳಿಗೆ ಸುಬ್ಬಯ್ಯ ವೈದ್ಯಕೀಯ
ಮಹಾವಿದ್ಯಾಲಯದವತಿಯಿಂದ ಉಚಿತ ಹೆಲ್ತ್‌ಕಾರ್ಡ್ (ಕುಟುಂಬದ ಸದಸ್ಯರಿಗೆ) ನೀಡಲಾಗುತ್ತದೆ. ಹೆಲ್ತ್‌ಕಾರ್ಡ್‌ನ ಅವಧಿ ಒಂದು ವರ್ಷಕ್ಕೆ ಸಿಮೀತವಾಗಿರುತ್ತದೆ.
     ಸಾರ್ವಜನಿಕರು ಜನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಅರುಣ್ ಕುಮಾರ್ : 9448329866, ಮಂಜುನಾಥ : 9972387099, 
ಸಂಜೀವರಾವ್ ಸಿಂಧ್ಯಾ : 94494 26872,  ಕುಮಾರ .ಜೆ : 99801 76516, ಮೊಹಮ್ಮದ್: 8951617838
ಮತ್ತು ಕಾಂತರಾಜ್ : 9900131155 ಸಂಪರ್ಕಿಸಬಹುದಾಗಿದೆ.

No comments:

Post a Comment