ಆ.೨೪ ಆಯ್ಕೆ ಸ್ಪರ್ಧೆ, ೩೦ ಮೊದಲ ಸುತ್ತಿನ ಸ್ಪರ್ಧೆ, ಸೆ.೬ ಅಂತಿಮ ಸುತ್ತಿನ ಸ್ಪರ್ಧೆ
ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಭದ್ರಾವತಿಯಲ್ಲಿ ಆಯೋಜಿಸಿರುವ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮಾಹಿತಿ ನೀಡಿದರು.
ಭದ್ರಾವತಿ, ಆ. ೧೮: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ರೇಣುಕಾ ಟವರ್ಸ್, ರಂಗಪ್ಪ ವೃತ್ತ ಇವರ ಆಶ್ರಯದಲ್ಲಿ ದಿವಂಗತ ಶಂಕರ್‌ನಾಗ್ ಸಂಸ್ಮರಣೆ ಕಾರ್ಯಕ್ರಮದ ಅಡಿಯಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯಲ್ಲಿ ೧೮ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ, ತೃತೀಯ ಬಹುಮಾನ ೧೦ ಸಾವಿರ ರು. ಮತ್ತು ಪಾರಿತೋಷಕ ಹಾಗು ಸಮಾಧಾನಕಾರ ಬಹುಮಾನ ೨ ಸಾವಿರ ರು. ನೀಡಲಾಗುವುದು. ಹೆಸರು ನೋಂದಾಯಿಸಲು ಆ.೨೩ ಕಡೆಯ ದಿನವಾಗಿದ್ದು, ಪ್ರವೇಶ ಶುಲ್ಕ ೭೫೦ ರು. ನಿಗದಿಪಡಿಸಲಾಗಿದೆ ಎಂದರು.
ನಗರದ ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಕ್ಲಬ್‌ನಲ್ಲಿ ಆ.೨೪ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ಆಯ್ಕೆ ಸ್ಪರ್ಧೆ ನಡೆಯಲಿದ್ದು, ೩೦ರಂದು ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದೆ. ಸೆ.೬ರಂದು ಅಂತಿಮ ಸುತ್ತಿನ ಸ್ಪರ್ಧೆ ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಹಿನ್ನಲೆ ಗಾಯಕರಾದ ಗುರುರಾಜ್, ಅಜಯ್ ವಾರಿಯರ್ ಮತ್ತು ಸುರೇಖಾ ಹೆಗಡೆ, ವಾದ್ಯಗೋಷ್ಠಿ ಕಲಾವಿದರಾಗಿ ದೀಪಕ್ ಜಯಶೀಲನ್, ರಾಮರಾವ್ ರಂಗಧೋಳ್, ಮೆಲ್ವಿನ್ ಲೀಮಾ, ರಮೇಶ್, ಮೋನಿಕ್ ಜಯಶೀಲನ್, ವಿಠ್ಠಳ್ ರಂಗಧೋಳ್ ಮತ್ತು ವೀರೇಶ್ ಹಾಗು ನಿರೂಪಕರಾಗಿ ಯೋಗೀಶ್ ಮಿರ್ಜಾನ್ ಭಾಗವಹಿಸಲಿದ್ದಾರೆ ಎಂದರು.
ಸ್ಪರ್ಧೆ ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗು ಹಿರಿಯ ಕಲಾವಿದರಿಗೆ ಜಯಶೀಲನ್ ಮತ್ತು ಗೀತಾಂಜಲಿ ಪ್ರಶಸ್ತಿ ಪ್ರದಾನ ಹಾಗು ಗೌರವ ಸಮರ್ಪಣೆ ನಡೆಯಲಿದೆ ಎಂದರು.
ಸಂಘದ ಗೌರವ ಸಲಹೆಗಾರ ಬಿ.ಆರ್ ವಿಕ್ರಂ, ಪ್ರಧಾನ ಕಾರ್ಯದರ್ಶಿ ಬಿ. ಚಿದಾನಂದ, ಸಹ ಕಾರ್ಯದರ್ಶಿ ಚರಣ್ ಕವಾಡ್, ಸದಸ್ಯರಾದ ಶಂಕರ್‌ಬಾಬು, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment