ಭದ್ರಾವತಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಸಂಸದರ ನಿಧಿಯಿಂದ ಮಂಜೂರಾದ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶಾಸಕ ಬಿ.ಕೆ.ಸಂಗಮೇಶ್ವರ ನೆರವೇರಿಸಿದರು.
ಭದ್ರಾವತಿ, ಜೂ. ೧೯: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಸಂಸದರ ನಿಧಿಯಿಂದ ಮಂಜೂರಾದ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶಾಸಕ ಬಿ.ಕೆ.ಸಂಗಮೇಶ್ವರ ನೆರವೇರಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಕಾರ್ಯದರ್ಶಿ ಶಿವಕುಮಾರ್, ಬಿ.ಕೆ. ಜಗನ್ನಾಥ್, ಸುರೇಶ್, ರುದ್ರಪ್ಪ, ಷಣ್ಮುಖಪ್ಪ, ಎಂ.ವಾಗೀಶ್ ಕೋಠಿ, ಚನ್ನೇಶ್ ಕುಮಾರ್, ಚನ್ನೇಶ್, ಸಿದ್ದಲಿಂಗಯ್ಯ, ಶಿವಯೋಗಿ ಮಠದ್, ಆಡವೀಶಯ್ಯ, ಡಾ.ಎಸ್.ಎಸ್ ವಿಜಯಾದೇವಿ, ನಾಗರತ್ನ, ಕಲ್ಪನ, ಸುಜಾತ, ನಾಗರತ್ನ, ಯಶೋಧ, ಪ್ರಭಾಕರ್, ಮಂಗೋಟೆ ರುದ್ರೇಶ್, ಮಂಜುನಾಥ್, ರಾಮನಾಥ್ ಬರ್ಗೆ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಹೇಶ್ವರಯ್ಯ, ವೇ.ಚಿನ್ನಯ್ಯ ಹಿರೇಮಠ್ ಮತ್ತು ಶಂಕರಯ್ಯ ಹಿರೇಮಠ್ ರವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.