ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
ಭದ್ರಾವತಿ, ಡಿ. ೪: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
ದೀಪೋತ್ಸವದ ಅಂಗವಾಗಿ ಧಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರಗಳೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ದೀಪದ ಬೆಳಕಿನಲ್ಲಿ ಕಂಗೊಳಿಸಿದ ಧಾಮ:
ಶ್ರೀ ಶಿವ ಸಾಯಿ ಕೃಪ ಧಾಮದ ವಿಶಾಲವಾದ ಆವರಣ ಸೇರಿದಂತೆ ಎಲ್ಲೆಡೆ ದೀಪಗಳು ಕಂಗೊಳಿಸಿದವು. ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ದೀಪಗಳನ್ನು ಬೆಳಗುವ ಜೊತೆಗೆ ಕಣ್ತುಂಬಿ ಕೊಂಡರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಶ್ರೀ ಶಿವ ಸಾಯಿ ಕೃಪ ಧಾಮದ ಟ್ರಸ್ಟಿಗಳು, ಪ್ರಧಾನ ಅರ್ಚಕರು ಹಾಗು ಸೇವಾಕರ್ತರು ಉಪಸ್ಥಿತರಿದ್ದರು. ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್‌ಶೆಡ್, ವಿದ್ಯಾಮಂದಿರ, ಜನ್ನಾಪುರ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.