ಬಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಸಮಾಜ ಸೇವಕ ಇಬ್ರಾಹಿಂ ಖಾನ್
ಭದ್ರಾವತಿ ಹಳೇನಗರದ ಖಾಜಿ ಮೊಹಲ್ಲಾ ನಿವಾಸಿ ಜಾಫರ್ ಮೌಲಾನಾರವರ ಪುತ್ರ ಅತಾವುಲ್ಲಾ ಹಸೇನ್ ಜಾಫ್ರಿ ಅನಾರೋಗ್ಯದಿಂದ ಅಂಗ ವೈಕಲ್ಯಕ್ಕೆ ತುತ್ತಾಗಿರುವುದು.
ಭದ್ರಾವತಿ, ಮಾ. ೯: ಅನಾರೋಗ್ಯದಿಂದ ಅಂಗವಿಕಲಗೊಂಡಿರುವ ಬಡ ಕುಟುಂಬದ ಬಾಲಕನಿಗೆ ಸರ್ಕಾರದಿಂದ ಅಂಗವಿಕಲ ವೇತನ ಮಂಜೂರಾತಿ ಮಾಡಿಸಿಕೊಡುವ ಮೂಲಕ ಹಳೇನಗರದ ತಾಲೂಕು ಕಛೇರಿ ರಸ್ತೆ ನಿವಾಸಿ, ಸಮಾಜ ಸೇವಕ ಇಬ್ರಾಹಿಂ ಖಾನ್ ಮಾನವೀಯತೆ ಮೆರೆದಿದ್ದಾರೆ.
ಖಾಜಿ ಮೊಹಲ್ಲಾ ನಿವಾಸಿ ಜಾಫರ್ ಮೌಲಾನಾರವರ ಪುತ್ರ ಅತಾವುಲ್ಲಾ ಹಸೇನ್ ಜಾಫ್ರಿ ಸುಮಾರು ೫ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಫಲಕಾರಿಯಾಗದೆ ಅಂಗ ವೈಕಲ್ಯಕ್ಕೆ ತುತ್ತಾಗಿದ್ದಾನೆ. ಈ ಹಿನ್ನಲೆಯಲ್ಲಿ ಬಡ ಕುಟುಂಬದ ನೆರವಿಗೆ ಧಾಮಿಸಿದ ಇಬ್ರಾಹಿಂ ಖಾನ್ ಬಾಲಕನಿಗೆ ಸರ್ಕಾರದಿಂದ ಅಂಗವಿಕಲ ವೇತನ ಮಂಜೂರಾತಿ ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದು, ಮಂಜೂರಾತಿ ಆದೇಶ ಪತ್ರವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಅಂಗವಿಕಲ ವೇತನ ಮಂಜೂರಾತಿ ಮಾಡಿಕೊಡುವಲ್ಲಿ ಸಹಕರಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕಂದಾಯಾಧಿಕಾರಿ ಪ್ರಶಾಂತ್, ರಾಜಸ್ವ ನಿರೀಕ್ಷಕ ಅನಿಲ್‌ರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.