ಭದ್ರಾವತಿ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್ರವರ ತಾಯಿ ಮೀನಾಕ್ಷಮ್ಮನವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭದ್ರಾವತಿ: ನಗರದ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್ರವರ ತಾಯಿ ಮೀನಾಕ್ಷಮ್ಮನವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮೂಲತಃ ಗಾಂಧಿನಗರದ ನಿವಾಸಿಯಾಗಿದ್ದ ಮೀನಾಕ್ಷಮ್ಮನವರು ದುಬೈನಲ್ಲಿ ನೆಲೆಸಿದ್ದರು. ಅ.೧೭ರಂದು ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ದುಬೈನಲ್ಲಿ ನೆರವೇರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಮೀನಾಕ್ಷಮ್ಮನವರ ಪುತ್ರ, ಕಾರುಣ್ಯ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್, ಪುತ್ರಿ ಜಿ. ಸುಜಾತ, ಒಳಗೊಂಡಂತೆ ಅಪಾರ ಬಂಧುಗಳು ಹಾಗು ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಂತಾಪ ವ್ಯಕ್ತಪಡಿಸಿದರು.
ಗಾಂಧಿನಗರದ ಬಲಮುರಿ ಗಣಪತಿ ದೇವಾಲಯದ ಅರ್ಚಕರಾದ ಮುರಳೀಧರ ಶರ್ಮ ಹಾಗು ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪ್ರಮುಖರಾದ ನಾಗವೇಣಿ, ಮುಖಂಡ ಜಯಪಾಲ್ ಸೇರಿದಂತೆ ಇನ್ನಿತರರು ಮೀನಾಕ್ಷಮ್ಮರ ಸೇವಾ ಕಾರ್ಯಗಳನ್ನು ಸ್ಮರಿಸಿದರು.
ಚಿದಾನಂದ್, ಧನಪಾಲ್ ಸಿಂಗ್ ಹಾಗು ತ್ರಿವೇಣಿ ಮಾತೃಪ್ರೇಮದ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಆರಂಭದಲ್ಲಿ ಮೌನಾಚರಣೆ ನಡೆಸಿ ಪುಷ್ಪನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗಾಂಧಿನಗರದ ಬಲಮುರಿ ಗಣಪತಿ ದೇವಾಲಯದ ದೇವಸ್ಥಾನ ಸಮಿತಿ ಅಧ್ಯಕ್ಷ ಕುಮಾರಪ್ಪ, ವೈದ್ಯ ನರೇಂದ್ರ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸ್ವಾಗತಿಸಿ, ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.