![](https://blogger.googleusercontent.com/img/b/R29vZ2xl/AVvXsEiZtBitVVn8X89QV3v6EQNvByExMrP3Q0mwbDwqf8nEyI5-ZCPgLmQzlsM1-avqL0t6HVfkx6iHmSr6sCuEYDUcwook3Gox4epcjYmBly8ZZOKTlFbGwmI6_Yquuq2MuK6an9vSRzQ8cmLq/w400-h300-rw/D12-BDVT-718761.jpg)
ಭದ್ರಾವತಿ ನಗರದ ಹೊಸಮನೆ ಮುಖ್ಯರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೯ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಭದ್ರಾವತಿ, ಫೆ. ೧೨: ನಗರದ ಹೊಸಮನೆ ಮುಖ್ಯರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೯ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಶನಿವಾರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶುಕ್ರವಾರ ಸಂಜೆ ಗಣಪತಿ ಪೂಜೆ, ಪುಣ್ಯಾಹ, ಕಂಕಣ ಬಂಧನ, ೧೦೮ ಕಲಶ ಪ್ರತಿಷ್ಠೆ, ಕಲಾಶಾಧಿವಾಸ, ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆgಗಳೊಂದಿಗೆ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಶನಿವಾರ ಸಾಮೂಹಿಕ ನವಗ್ರಹ ಹೋಮ, ಶನೈಶ್ವರ ಹೋಮ, ಶ್ರೀಸ್ವಾಮಿಗೆ ೧೦೮ ಕಲಶದ ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಫೆ.೧೩ರ ಭಾನುವಾರ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗು ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ನಡೆಯಲಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಆರ್ ಗೋವಿಂದಸ್ವಾಮಿ, ಗೌರವ ಸಲಹೆಗಾರ ಎಸ್.ಎನ್ ಸುಭಾಷ್, ಉಪಾಧ್ಯಕ್ಷ ಎ.ಎಂ ದೇವೇಂದ್ರ, ಕಾರ್ಯದರ್ಶಿ ಎಚ್.ಎಂ ತಿಪ್ಪೇಸ್ವಾಮಿ, ಸಹಕಾರ್ಯದರ್ಶಿ ಎಂ.ಆರ್ ಮಹೇಶ್, ಖಜಾಂಚಿ ಡಿ.ಎಚ್. ಮುಕುಂದಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಚೌಡಪ್ಪ, ಮಲ್ಲೇಶಪ್ಪ, ಎಂ.ವಿ ಆನಂದ್‌ಮೂರ್ತಿ ಮತ್ತು ಅಜಯ್ ಸೇರಿದಂತೆ ಸುತ್ತಮತ್ತ ಅಂಗಡಿಮುಂಗಟ್ಟುಗಳ ವ್ಯಾಪಾರಸ್ಥರು, ಸ್ಥಳೀಯ ನಿವಾಸಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು.