ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಮುಂಭಾಗದ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿದಿನ ಮಧ್ಯಾಹ್ನ ೧೫೦ ಮಂದಿಗೆ ದ್ವಿಚಕ್ರ ವಾಹನದಲ್ಲಿ ಊಟ ಪೂರೈಕೆ ಮಾಡುತ್ತಿರುವುದು.
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ನಗರದ ಕಡು ಬಡವರು, ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಮುಂಭಾಗದ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನೆರವಾಗಿದ್ದಾರೆ.
ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ನಿರಂತರವಾಗಿ ಅಡುಗೆ ತಯಾರಿಸುವ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಸುಮಾರು ೧೫೦ ಮಂದಿಗೆ ಸಾಕಾಗುವಷ್ಟು ಊಟ ತಯಾರಿಸಿ ದ್ವಿಚಕ್ರ ವಾಹನದಲ್ಲಿಯೇ ಪದಾಧಿಕಾರಿಗಳು ಕಡು ಬಡವರು, ನಿರಾಶ್ರಿತರು, ವಲಸೆ ಕಾರ್ಮಿಕರಿರುವ ಸ್ಥಳಗಳಿಗೆ ತೆರಳಿ ಪೂರೈಸುತ್ತಿದ್ದಾರೆ. ಯಾವುದೇ ಆರ್ಥಿಕ ನೆರವಿಲ್ಲದಿದ್ದರೂ ಸ್ವಂತ ಹಣದಲ್ಲಿ ತಮ್ಮ ಕೈಲಾದಷ್ಟು ನೆರವನ್ನು ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಕೈಗೊಳ್ಳುತ್ತಿರುವುದು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ.
ಸಂಘದ ಅಧ್ಯಕ್ಷ ಆರ್. ವೆಂಕಟೇಶ್ ನೇತೃತ್ವದಲ್ಲಿ ಉಪಾಧ್ಯಕ್ಷ ವಿಲ್ಸನ್ ಬಾಬು, ಕಾರ್ಯದರ್ಶಿ ಜಗದೀಶ್, ಸದಸ್ಯರಾದ ದಿನೇಶ್, ಅರುಣ್‌ಕುಮಾರ್, ರವಿಕುಮಾರ್ ಹಾಗೂ ಅರಳಿಕಟ್ಟೆ ಯುವಕರ ಬಳಗ ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅಡುಗೆ ತಯಾರಕರಾದ ಕುಮಾರ್ ಮತ್ತು ಕೃಷ್ಣಮೂರ್ತಿ ಈ ತಂಡಕ್ಕೆ ನೆರವಾಗಿದ್ದಾರೆ.
No comments:
Post a Comment