ಭದ್ರಾವತಿ, ಜು. ೩೧: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ಸ್ಪೋಟಗೊಳ್ಳುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಒಂದೇ ದಿನ ೧೮ ಪ್ರಕರಣಗಳು ಪತ್ತೆಯಾಗಿವೆ.
ಕಾಗದನಗರದ ೬ನೇ ವಾರ್ಡ್‌ನಲ್ಲಿ ೩೫ ವರ್ಷದ ಪುರುಷ, ಬಿ.ಎಚ್ ರಸ್ತೆಯಲ್ಲಿ ೪೫ ವರ್ಷದ ವ್ಯಕ್ತಿ, ದೊಡ್ಡಗೊಪ್ಪೇನಹಳ್ಳಿಯಲ್ಲಿ ೨೫ ವರ್ಷದ ಯುವಕ, ಗಾಂಧಿನಗರದಲ್ಲಿ ೭೭ ವರ್ಷದ ವೃದ್ಧೆ, ಉಜ್ಜನಿಪುರದಲ್ಲಿ ೧೯ ವರ್ಷದ ಯುವತಿ, ಭೂತನಗುಡಿಯಲ್ಲಿ ೩೦ ಮತ್ತು ೩೪ ವರ್ಷದ ಇಬ್ಬರು ಸಹೋದರರು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಿಲ್ಟ್ರಿಕ್ಯಾಂಪ್‌ನಲ್ಲಿ ವಾಸವಿರುವ ೨೮ ವರ್ಷದ ಪುರುಷ, ದೊಡ್ಡೇರಿ ಗ್ರಾಮದಲ್ಲಿ ೫೨ ವರ್ಷದ ವ್ಯಕ್ತಿ, ಆಂಜನೇಯ ಅಗ್ರಹಾರದಲ್ಲಿ ೩೫ ವರ್ಷದ ಪುರುಷ, ಅಂಬೇಡ್ಕರ್ ನಗರದಲ್ಲಿ ೫೪ ವರ್ಷ ವ್ಯಕ್ತಿ, ಸೀಗೆಬಾಗಿಯಲ್ಲಿ ೩೯ ವರ್ಷದ ಮಹಿಳೆ, ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದಲ್ಲಿ ೬೫ ವರ್ಷದ ವ್ಯಕ್ತಿ, ಸಿದ್ದರೂಢನಗರದಲ್ಲಿ ೬೨ ವ್ಯಕ್ತಿ ಹಾಗೂ ೫೮ ವರ್ಷದ ಈತನ ಪತ್ನಿ, ಖಾಜಿಮೊಹಲ್ಲಾ ಕೋಟೆ ಏರಿಯಾದಲ್ಲಿ ೬೯ ವರ್ಷದ ವೃದ್ಧೆ, ಅರಣ್ಯ ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ ತರೀಕೆರೆ ಗೋಪಾಲ ಕಾಲೋನಿ ನಿವಾಸಿ ೩೩ ವರ್ಷದ ಪುರುಷ ಹಾಗೂ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದ ಶಿವಮೊಗ್ಗ ಅಶೋಕ ನಗರದ ೨೬ ವರ್ಷದ ಯುವಕ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.
No comments:
Post a Comment