ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಷಣ್ಮುಖ ಎಂಬುವರ ಪುತ್ರ ಎಸ್. ತರುಣ್
ಭದ್ರಾವತಿ, ಆ. ೧೧: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಗದನಗರ ಆಂಗ್ಲ ಶಾಲೆಗೆ ಶೇ.೭೬.೪೭ ಫಲಿತಾಂಶ ಲಭಿಸಿದ್ದು, ಒಟ್ಟು ಪರೀಕ್ಷೆ ಬರೆದ ೩೪ ವಿದ್ಯಾರ್ಥಿಗಳಲ್ಲಿ ೨೬ ಮಂದಿ ಉತ್ತೀರ್ಣರಾಗಿದ್ದಾರೆ.
ಚೇತನ್‌ಕುಮಾರ್ .ಎಚ್-೫೬೫, ಹರ್ಷಿತ .ಕೆ-೫೩೦, ಅಮೃತ್ ಎಂ.ಆರ್-೫೧೫, ಮಾನನಿ ಸಿ.ಎಚ್-೫೦೫, ದೀಕ್ಷಿತಾ ಕೆ.ಜಿ-೫೦೧, ರೋಹನ್ .ಜೆ-೪೯೧ ಮತ್ತು ಪವನ್ ಎ.ಎಸ್-೪೯೧ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಕನಕ ವಿದ್ಯಾಸಂಸ್ಥೆ ಕನ್ನಡ ವಿಭಾಗ ಶೇ.೭೧, ಆಂಗ್ಲ ವಿಭಾಗ ಶೇ.೮೫ ಫಲಿತಾಂಶ:
ಹಳೇನಗರದ ಕನಕ ವಿದ್ಯಾಸಂಸ್ಥೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಭಾಗದಲ್ಲಿ ಶೇ.೭೧ ಹಾಗೂ ಆಂಗ್ಲ ವಿಭಾಗದಲ್ಲಿ ಶೇ.೮೫ ಫಲಿತಾಂಶ ಪಡೆದುಕೊಂಡಿದೆ.
ಕನ್ನಡ ವಿಭಾಗದಲ್ಲಿ ಇಂಚರ ಕೆ.ಆರ್-೫೭೦ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಂಗ್ಲ ವಿಭಾಗದಲ್ಲಿ ಸುಹಾಸ್ ಬಿ.ಎಸ್-೫೭೪, ದೀಕ್ಷಿತ ಕುಮಾರಿ .ಎ-೫೭೦, ದೀಕ್ಷಾ ಎಸ್. ಗಾಣಿಗ-೫೫೭, ನಯನ .ಆರ್. ಮಿರಜ್‌ಕರ್-೫೩೫, ಹಿತೇಶ್-೫೧೭, ಕಾರ್ತಿಕ್ .ಸಿ-೫೦೦ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದು, ಈ ವಿಭಾಗದಲ್ಲಿ ೨೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಎಚ್.ಎನ್ ಲಿಖಿತ್ ಪಟೇಲ್ ಶೇ.೯೪.೫ ಫಲಿತಾಂಶ:
ನಗರದ ಲೋಯರ್ ಹುತ್ತಾ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿ ಎಚ್.ಎನ್ ಲಿಖಿತ್ ಪಟೇಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ೫೯೦ ಅಂಕಗಳೊಂದಿಗೆ ಶೇ.೯೪.೫ ಫಲಿತಾಂಶ ಪಡೆದುಕೊಂಡಿದ್ದಾನೆ.
ಈ ವಿದ್ಯಾರ್ಥಿ ಲಯನ್ಸ್ ಹೆಬ್ಬಂಡಿ ನಾಗರಾಜ್‌ರವರ ಪುತ್ರನಾಗಿದ್ದು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಈ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
ಸುಷ್ಮ ಶೇ.೯೭.೨೮ ಫಲಿತಾಂಶ:
ನಗರ ನ್ಯೂಟೌನ್ ಸೇಂಟ್ ಚಾರ್ಲ್ಸ್ ಪ್ರೌಢ ಶಾಲೆ ವಿದ್ಯಾರ್ಥಿನಿ ಸುಷ್ಮ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ೬೦೮ ಅಂಕಗಳೊಂದಿಗೆ ಶೇ.೯೭.೨೮ ಫಲಿತಾಂಶು ಪಡೆದುಕೊಂಡಿದ್ದಾಳೆ.
ಈ ವಿದ್ಯಾರ್ಥಿನಿ ಸಿದ್ಧರೂಢನಗರದ ನಿವಾಸಿ ನಾಗರಾಜ್ ಮತ್ತು ಮಧುಮತಿ ದಂಪತಿ ಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿ ಸಾಧ್ಯನೆಯನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.
ಬಿ.ವಿ ಇಳಾ ಕೌಲ್ ೬೧೮ ಅಂಕ:
ನಗರದ ಲೋಯರ್ ಹುತ್ತಾ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿನಿ ಬಿ.ವಿ ಇಳಾ ಕೌಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೮ ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಈಕೆ ಕೆ. ವೀರಭದ್ರಸ್ವಾಮಿ ಮತ್ತು ಸವಿತಾ ಆಚಾರ್ ದಂಪಿತಿ ಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿ ಸಾಧ್ಯನೆಯನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.
ಬುಟ್ಟಿ ಹೆಣೆಯುವವರ ಮಗನಿಗೆ ೬೦೫ ಅಂಕ:
ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆ ವಿದ್ಯಾರ್ಥಿ ಎಸ. ತರುಣ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೦೫ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.
ಈ ವಿದ್ಯಾರ್ಥಿಯ ತಂದೆ ಷಣ್ಮುಖ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಬಡ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
No comments:
Post a Comment