ಕೆ.ಆರ್ ಹಿರಣ್ಣಯ್ಯ
ಭದ್ರಾವತಿ, ಸೆ. ೨೮: ಇಲ್ಲಿನ ಹಳೇನಗರದ ನಿವಾಸಿ ಕೆ.ಆರ್.ಹಿರಣ್ಣಯ್ಯ(೯೦) ಭಾನುವಾರ ನಿಧನ ಹೊಂದಿದರು.
ಮೃತರು ನಾಲ್ವರು ಪುತ್ರರನ್ನು ಹೊಂದಿದ್ದು, ಇವರ ಅಂತ್ಯಕ್ರಿಯೆ ಸೋಮವಾರ ಶಿವಮೊಗ್ಗದಲ್ಲಿ ನೆರವೇರಿತು. ಹಿರಣ್ಣಯ್ಯ ಹಳೇನಗರ ರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾಗಿ, ವೇದಮಾತ ಅನ್ನದಾನ ಸಮಿತಿ ಪ್ರಾರಂಭಿಕ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment