ಭದ್ರಾವತಿ, ಸೆ. ೨೩: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಬಾರಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಆನ್‌ಲೈನ್‌ನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಪ್ರಾಥಮಿಕ, ಪ್ರೌಢ ಹಾಗು ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಮತ್ತು ಫೇಸ್‌ಬುಕ್ ತಂತ್ರಜ್ಞಾನ ಬಳಸಿ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ವರಚಿತ ಕಥೆ, ಕವನ, ಹನಿಗವನ, ಪ್ರಬಂಧ, ಜಾನಪದ ಮತ್ತು ಭಾವಗೀತೆ ಆನಾವರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರಬಂಧ ಬರೆಯುವವರು ೧. ಸ್ವಾಭಾವಿಕ ಅರಣ್ಯ ಉಳಿಸಲು, ಪರಿಸರ ನಾಶ ತಡೆಯಲು ನಿಮ್ಮ ಚಿಂತನೆಗಳು, ೨. ಕರ್ನಾಟಕ ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆಯ ಸಾಧಕ-ಭಾದಕಗಳು, ೩. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ೪. ಶಾಲಾ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವ ಇತ್ಯಾದಿ ವಿಚಾರಗಳನ್ನು ಅನಾವರಣಗೊಳಿಸುವಂತಿರಬೇಕು.
ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳು ಸೆ.೩೦ರೊಳಗೆ ಸಮ್ಮೇಳನದಲ್ಲಿ ಭಾವಹಿಸುವ ಕುರಿತು ವಾಟ್ಸ್‌ಪ್ ಸಂಖ್ಯೆ ಕೋಗಲೂರು ತಿಪ್ಪೇಸ್ವಾಮಿ : ೯೦೦೮೫೧೫೪೩೨, ಎಂ.ಆರ್ ಮಂಜುನಾಥ್ : ೯೭೪೦೫೫೯೨೩೯, ಬಿ. ಮಂಜಪ್ಪ: ೯೯೦೦೮೩೦೨೮೫ ಮತ್ತು ಎಸ್.ಎನ್ ಶಶಿಕುಮಾರ್ : ೮೦೭೩೬೩೩೩೫೩ ಮಾಹಿತಿ ನೀಡಬಹುದಾಗಿದೆ ಎಂದು ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪೇಸ್ವಾಮಿ ತಿಳಿಸಿದ್ದಾರೆ.
No comments:
Post a Comment