ಕಡುಬಡವರಿಗೆ ಹಾಗು ಮಳೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಭದ್ರಾವತಿ ಆಂಜನೇಯ ಅಗ್ರಹಾರದಲ್ಲಿ ಬುಧವಾರ ಆಹಾರ ಸಾಮಗ್ರಿ ಹಾಗು ದಿನ ಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಭದ್ರಾವತಿ, ಸೆ. ೩೦: ಕಡುಬಡವರಿಗೆ ಹಾಗು ಮಳೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ನಗರದ ಆಂಜನೇಯ ಅಗ್ರಹಾರದಲ್ಲಿ ಬುಧವಾರ ಆಹಾರ ಸಾಮಗ್ರಿ ಹಾಗು ದಿನ ಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಟೀ ಪುಡಿ, ದಿನ ಬಳಕೆ ವಸ್ತುಗಳಾದ ಸೋಪು, ಟೂತ್‌ಫೇಸ್ಟ್, ಹ್ಯಾಂಡ್ ವಾಸ್, ಸ್ಯಾನಿಟೈಜರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಶಿವಮೊಗ್ಗ ಹರಿಗೆ ಲೀತಾ ಚಾರಿಟಬಲ್ ಟ್ರಸ್ಟ್ ಮತ್ತು ಜ್ಞಾನ ಜ್ಯೋತಿ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಎಂ.ಎ ಅಜಿತ್, ಗುಣಶೇಖರ್, ಪ್ರಮುಖರಾದ ಬಿ.ಆರ್ ಕುಮಾರ್, ಸತೀಶ್, ಎಂ.ಪಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment