ಪಟೇಲ್ ಹನುಮಂತಪ್ಪ
ಭದ್ರಾವತಿ, ಸೆ. ೨೮: ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷೆ ಪದ್ಮಮ್ಮರವರ ಪತಿ ಹಳೇನಗರದ ರಥಬೀದಿ ರಸ್ತೆ ನಿವಾಸಿ, ಜಮೀನ್ದಾರ್ ಆರ್. ಪಟೇಲ್ ಹನುಮಂತಪ್ಪ(೭೪) ನಿಧನ ಹೊಂದಿದರು.
ಪತ್ನಿ, ೨ ಗಂಡು, ೨ ಹೆಣ್ಣು ಮಕ್ಕಳು, ಸೊಸೆ ಹಾಗು ಅಳಿಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಹನುಮಂತಪ್ಪ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಒಡನಾಡಿಯಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ, ಜಿ.ಪಂ. ಸದಸ್ಯ ಜೆ.ಪಿ ಯೋಗೇಶ್, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಸಿಂಗನಮನೆ ಗ್ರಾ.ಪಂ. ಸದಸ್ಯ ಟಿ.ಡಿ. ಶಶಿಕುಮಾರ್, ನಾಗರಾಜ್ ಮಧುಗಿರಿ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment