ಭದ್ರಾವತಿ ಹಳೇಬುಳ್ಳಾಪುರದ ನಿವಾಸಿ ಸ್ನೇಕ್ ಜೋಯಲ್ ಸ್ನೇಹಿತರ ತಂಡ ತಾಲೂಕಿನ ಸಮೀಪದ ಉಂಬ್ಳೆಬೈಲು ಗ್ರಾಮದಲ್ಲಿ ಬಾರಿ ಗಾತ್ರದ ಹೆಬ್ಬಾವು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದೆ.
ಭದ್ರಾವತಿ, ಸೆ. ೧೭: ನಗರದ ಹಳೇಬುಳ್ಳಾಪುರದ ನಿವಾಸಿ ಸ್ನೇಕ್ ಜೋಯಲ್ ಸ್ನೇಹಿತರ ತಂಡ ತಾಲೂಕಿನ ಸಮೀಪದ ಉಂಬ್ಳೆಬೈಲು ಗ್ರಾಮದಲ್ಲಿ ಬಾರಿ ಗಾತ್ರದ ಹೆಬ್ಬಾವು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದೆ.
ಮನೆಯೊಂದರಲ್ಲಿ ಅಡಗಿದ್ದ ಸುಮಾರು ೧೫ ಅಡಿ ಉದ್ದದ, ೩೫ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿಯಲಾಗಿದೆ. ಹೆಬ್ಬಾವು ಕಂಡು ಭಯಭೀತರಾಗಿದ್ದ ಮನೆಯವರು ತಕ್ಷಣ ಸ್ನೇಕ್ ಜೋಯಲ್‌ಗೆ ಕರೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಜೋಯಲ್ ಸ್ನೇಹಿತರ ತಂಡ ಸುರಕ್ಷಿತವಾಗಿ ಸೆರೆ ಹಿಡಿದಿದೆ.
ಜೋಯಲ್ ಸ್ನೇಹಿತರಾದ ಸತ್ಯ, ಡೆನ್ನಿಸ್, ಸಂತು, ತಿಲಕ್, ಜಾಯ್ಸನ್, ಅಭಿ ಮತ್ತು ಲೋಯಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
No comments:
Post a Comment