ಭದ್ರಾವತಿ ಹೊಸಮನೆ ಹನುಮಂತ ನಗರದಲ್ಲಿ ಇತ್ತೀಚಿಗೆ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಮನೆ ಠಾಣೆ ಪೊಲೀಸರು ಯಶಸ್ವಿಯಾಗಿರುವುದು.
ಭದ್ರಾವತಿ, ಅ. ೧೦: ನಗರದ ಹೊಸಮನೆ ಹನುಮಂತ ನಗರದಲ್ಲಿ ಇತ್ತೀಚಿಗೆ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಮನೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಮನೆ ಹನುಮಂತನಗರದ ನಿವಾಸಿಗಳಾದ ರಮೇಶ್ ಅಲಿಯಾಸ್ ಹಂದಿ ರಮೇಶ(೪೪), ವೆಂಕಟರಾಮ(೩೫), ಚಂದ್ರ ಅಲಿಯಾಸ್ ಚಾಣ(೩೭), ಹೊಸಮನೆ ಸತ್ಯಸಾಯಿ ನಗರದ ನಿವಾಸಿಗಳಾದ ಕಾರ್ತಿಕ್(೨೪), ಮಧುಸೂಧನ್ ಅಲಿಯಾಸ್ ಗುಂಡ ಮಂಜುನಾಥ(೨೮) ಮತ್ತು ರಮೇಶ್ ಅಲಿಯಾಸ್ ಕೆಳವಿ ರಮೇಶ(೩೭) ಎಂಬುವರನ್ನು ಬಂಧಿಸಲಾಗಿದೆ.
ಘಟನೆ ವಿವರ:
ಹೊಸಮನೆ ಹನುಮಂತ ನಗರದ ನಿವಾಸಿ ಮಹಮದ್ ಅಕ್ತರ್ ಎಂಬುವರ ಪುತ್ರ ಶಾರೂಖ್ ಖಾನ್‌ನನ್ನು ಸೆ.೩೦ರ ರಾತ್ರಿ ಕೊಲೆ ಮಾಡಲಾಗಿತ್ತು. ಈತನ ಮೃತದೇಹ ಹೊಸಮನೆ ನೂರಾನಿ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಅ.೧ರಂದು ಬೆಳಿಗ್ಗೆ ಪತ್ತೆಯಾಗಿತ್ತು.
ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆ ಪ್ರಕರಣ ಬೇಧಿಸಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಎಚ್.ಟಿ ಶೇಖರ್ ಹಾಗು ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯಕ್ ಮಾರ್ಗದರ್ಶನದಲ್ಲಿ ನಗರದ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಜಯಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ಕುಮಾರ್, ಮಂಜುನಾಥ್, ಮಖ್ಸೂದ್‌ಖಾನ್, ಸಂತೋಷ್‌ಕುಮಾರ್, ಅಂಬರೀಷ್, ವಿಶಾಲಾಕ್ಷಿ, ವಿಜಯಕಲಾ, ನವೀನ್ ಪವಾರ್, ಪ್ರಸನ್ನಸ್ವಾಮಿ, ಸುನಿಲ್‌ಕುಮಾರ್ ಹಾಗು ಚಾಲಕರಾದ ಮಧುಸೂಧನ್ ಮತ್ತು ರವಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತಕುಮಾರ್ ಅಭಿನಂದಿಸಿದ್ದಾರೆ.
No comments:
Post a Comment