ಭದ್ರಾವತಿಯಲ್ಲಿ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ಭದ್ರಾವತಿ, ಡಿ. ೧೮ : ಇತ್ತೀಚೆಗೆ ಬಿಡಾಡಿ ದನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ರಾತ್ರಿ ವೇಳೆ ವಾಹನಗಳ ಚಾಲಕರಿಗೆ ರಸ್ತೆಯಲ್ಲಿರುವ ಬಿಡಾಡಿ ದನಗಳು ತಕ್ಷಣ ಗೋಚರಿಸುವಂತಾಗಬೇಕು. ಇದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗುವ ಮೂಲಕ ಬಿಡಾಡಿ ದನಗಳ ರಕ್ಷಣೆ ಮಾಡಿದಂತಾಗುತ್ತದೆ ಎಂಬ ಕಾಳಜಿಯೊಂದಿಗೆ ಟ್ರಸ್ಟ್ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಹಳೇನಗರದ ಶ್ರೀ ಬಸವೆಶ್ವರ ವೃತ್ತ, ಚನ್ನಗಿರಿ ರಸ್ತೆ, ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿದ್ದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಈ ಕಾರ್ಯದಲ್ಲಿ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.
No comments:
Post a Comment