ಭದ್ರಾವತಿ, ಜ. ೨೮: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಗರದ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಹೊಸಮನೆ ನಿವಾಸಿಗಳಾದ ಗಿರೀಶ್ ಪುಟ್ಟೇಗೌಡ ಹಾಗೂ ಮೋಹನ್ ಪುಟ್ಟೆಗೌಡರ ಮಕ್ಕಳಾದ ಶಿಖರ್, ಕೌಶಿಕ್ ಮತ್ತು ದಿಗಂತ್ ಅಯೋಧ್ಯೆ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿರುವ ಮಾಹಿತಿ ಅರಿತು ಪ್ರತಿದಿನ ಕಾಣಿಕೆ ಹುಂಡಿಯಲ್ಲಿ ಹಣ ಸಂಗ್ರಹಿಸಿದ್ದರು. ಒಟ್ಟು ೩,೦೧೦ ರು. ಹಣ ನೀಡುವ ಗಮನ ಸೆಳೆದಿದ್ದಾರೆ.
ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಮುಖರಾದ ರಾಮನಾಥ್ ಬರ್ಗೆ, ಸುಬ್ರಮಣ್ಯ, ಸುನಿಲ್‌ಗಾಯಕ್‌ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭದ್ರಾವತಿ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
No comments:
Post a Comment