ಭದ್ರಾವತಿ, ಏ. ೨೩: ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ಇರುವ ಶ್ರೀ ಕನ್ಯಕಾ ಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ತೆರವಾಗಿದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ಏ. ೨೪ ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಅದೇಶದಂತೆ ಮುಂದೂಡಲಾಗಿದೆ.
ಮುಂದೂಡಿದ ಚುನಾವಣೆಯು ಮೇ.೩ರ ಸೋಮವಾರ ವಾಸವಿ ಮಹಲ್‌ನಲ್ಲಿ ನಡೆಯಲಿದೆ. ಸದಸ್ಯರು ತಪ್ಪದೇ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.
No comments:
Post a Comment