ಭದ್ರಾವತಿ ನಗರಸಭೆ ೩ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಜೆ. ನಕುಲ್ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಭದ್ರಾವತಿ, ಏ. ೯: ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ೨ನೇ ದಿನವಾದ ಶುಕ್ರವಾರ ಹಲವು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ನಗರಸಭೆ ೪ನೇ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಒಂದು ನಾಮಪತ್ರ, ೧೨ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಸುದೀಪ್‌ಕುಮಾರ್ ೨ ನಾಮಪತ್ರ, ೧೩ನೇ ವಾರ್ಡಿಗೆ ಜೆ. ಅನುಸುಧಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ, ೧೮ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ನಗರಸಭೆ ಮಾಜಿ ಸದಸ್ಯ ಆರ್. ಕರುಣಾಮೂರ್ತಿ ಒಂದು ನಾಮಪತ್ರ, ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ ಪುತ್ರ ಮಹಮ್ಮದ್ ಪರ್ವೀಜ್ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಭದ್ರಾವತಿ ನಗರಸಭೆ ೬ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಶ್ರೇಯಸ್ ಶುಕ್ರವಾರ ಎರಡು ನಾಮಪತ್ರ ಸಲ್ಲಿಸಿದರು.
ಬಿ ಫಾರಂ ಇಲ್ಲದೆ ೨೬ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿ ಪರಮೇಶ್ವರಿ ಒಂದು ನಾಮಪತ್ರ, ೨೫ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ. ಉದಯಕುಮಾರ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಂಜನಪ್ಪ, ೨೨ನೇ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ನರಸಯ್ಯ ಒಂದು ನಾಮಪತ್ರ, ೨೪ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ. ಮಸ್ತಾನ ಒಂದು ನಾಮಪತ್ರ, ೧೭ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಪ್ಪುಸುಲ್ತಾನ ಶಾಹೇ ಆಲಂ ಒಂದು ನಾಮಪತ್ರ, ೨೦ನೇ ವಾರ್ಡಿಗೆ ಹಾಲಿ ನಗರಸಭಾ ಸದಸ್ಯೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ದೇವಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಭದ್ರಾವತಿ ನಗರಸಭೆ ೪ನೇ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಶುಕ್ರವಾರ ನಾಮಪತ್ರ ಸಲ್ಲಿಸಿದರು.
೧೫ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ ಮಂಜುಳ ೨ ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ, ೧೬ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟೇಗೌಡ ಒಂದು ನಾಮಪತ್ರ, ಹಾಲಿ ನಗರಸಭಾ ಸದಸ್ಯೆ ವಿಶಾಲಾಕ್ಷಿ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎರಡು ನಾಮಪತ್ರ, ೩೪ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಆರ್ ಲತಾ ಚಂದ್ರಶೇಖರ್ ಒಂದು ನಾಮಪತ್ರ, ೩೩ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಎರಡು ನಾಮಪತ್ರ, ೩ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಜೆ. ನಕುಲ್ ಒಂದು ನಾಮಪತ್ರ, ೬ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಕೆ.ಆರ್ ಸತೀಶ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಶ್ರೇಯಸ್ ಎರಡು ನಾಮಪತ್ರ, ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಚನ್ನಯ್ಯ ಒಂದು ನಾಮಪತ್ರ ಸಲ್ಲಿಸಿದ್ದಾರೆ.
೧೧ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎ. ಪಚ್ಛೆಯಪ್ಪನ್ ಒಂದು ನಾಮಪತ್ರ, ೮ನೇ ವಾರ್ಡಿಗೆ ಘನಿ ಅಬುಲ್ ಖೈರ್ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮಹಮದ್ ಇನಾಯಿತ್ ಒಂದು ನಾಮಪತ್ರ, ೭ನೇ ವಾರ್ಡಿಗೆ ಎಂ. ರೇಣುಕಾ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, ೫ನೇ ವಾರ್ಡಿಗೆ ಕೆ.ಆರ್ ವೇದಾವತಿ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಮತ್ತು ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
No comments:
Post a Comment