ಅಂತಿಮ ಕಣದಲ್ಲಿ ೧೭೩ ಅಭ್ಯರ್ಥಿಗಳು, ೨೯ನೇ ವಾರ್ಡ್ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ನಿಧನ
ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮಾಹಿತಿ ನೀಡಿದರು.
ಭದ್ರಾವತಿ, ಏ. ೧೯: ಈ ಬಾರಿ ನಗರಸಭೆ ಚುನಾವಣೆಯಲ್ಲಿ ೧,೨೬,೬೧೩ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ತಿಳಿಸಿದರು.
ಅವರು ಸೋಮವಾರ ನಗರಸಭೆ ಚುನಾವಣೆ ಸಂಬಂಧ ಸಭೆ ನಡೆಸಿ ಮಾಹಿತಿ ನೀಡಿದರು. ವಿಧಾನಸಭಾ ಚುನಾವಣೆ ಮತದಾರರ ಪಟ್ಟಿಯಂತೆ ೧,೨೫,೫೯೫ ಮತದಾರರನ್ನು ಅಂತಿಮಗೊಳಿಸಲಾಗಿತ್ತು. ನಂತರ ಏ.೭ರ ಅಂತ್ಯಕ್ಕೆ ಒಟ್ಟು ೯೯೯ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದು, ಈ ಹಿನ್ನಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ ೧.೨೬,೬೧೩ ಆಗಿದೆ. ಈ ಪೈಕಿ ೬೧,೩೫೫ ಪುರುಷರು, ೬೫,೨೫೮ ಮಹಿಳೆಯರು ಸೇರಿದ್ದಾರೆ ಎಂದರು.
ಮತಗಟ್ಟೆಗಳ ಮಾಹಿತಿ:
೨೩ ಸೂಕ್ಷ್ಮ, ೫೪ ಅತಿ ಸೂಕ್ಷ್ಮ ಹಾಗು ೬೨ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು ೧೬೭ ಪಿ.ಆರ್.ಓ, ೧೬೭ ಎ.ಪಿ.ಆರ್.ಓ ಮತ್ತು ೩೧೪ ಪಿ.ಓ ಕರ್ತವ್ಯ ನಿರ್ವಹಿಸಲಿದ್ದಾರೆ.
೫ ಎಂ.ಸಿ.ಸಿ ತಂಡ ರಚನೆ :
ಒಟ್ಟು ೫ ಎಂ.ಸಿ.ಸಿ ತಂಡಗಳನ್ನು ರಚಿಸಲಾಗಿದ್ದು, ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ನಗರ ವೃತ್ತ ನಿರೀಕ್ಷಕರು ತಂಡಗಳ ಮುಖ್ಯಸ್ಥರಾಗಿದ್ದಾರೆ.
ವಾರ್ಡ್ ನಂ.೧, ೨, ೩, ೪, ೩೩, ೩೪ ಮತ್ತು ೩೫ ಒಳಗೊಂಡಿರುವ ೧ನೇ ತಂಡದಲ್ಲಿ ಕಿರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೊಟ್ರಪ್ಪ, ಎಎಸ್‌ಐ ಜಗದೀಶ್ ಮತ್ತು ಅಬಕಾರಿ ಹೆಡ್‌ಕಾನ್ಸ್‌ಸ್ಟೇಬಲ್ ಸುಧಾಮಣಿ, ವಾರ್ಡ್ ನಂ.೫, ೬, ೭, ೮, ೯, ೧೦ ಮತ್ತು ೧೧ ಒಳಗೊಂಡಿರುವ ೨ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈರಪ್ಪ, ಎಎಸ್‌ಐ ಶಿವಕುಮಾರ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಶಿವಮೂರ್ತಿ ನಾಯ್ಕ, ವಾರ್ಡ್ ನಂ.೧೨, ೧೩, ೧೪, ೧೫, ೧೬, ೧೭ ಮತ್ತು ೧೮ ಒಳಗೊಂಡಿರುವ ೩ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚೇತನ್, ಎಎಸ್‌ಐ ವಿಠ್ಠಲ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಶಶಿಧರ, ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ ಒಳಗೊಂಡಿರುವ ೪ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯತೀಶ್, ಎಎಸ್‌ಐ ಅಶೋಕ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಮಲ್ಲಿಕಾರ್ಜುನ, ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ ಒಳಗೊಂಡಿರುವ ೫ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್, ಎಎಸ್‌ಐ ಖಲೀಮುಲ್ಲ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಜ್ಞಾನೇಶ್ವರ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಸೆಕ್ಟರ್ ಅಧಿಕಾರಿಗಳ ನೇಮಕ :
ವಾರ್ಡ್ ನಂ.೧, ೨ ಮತ್ತು ೩ಕ್ಕೆ ಡಾ. ಕೆ ಬಸವರಾಜ್, ವಾರ್ಡ್ ನಂ. ೪,೫ ಮತ್ತು ೬ಕ್ಕೆ ಟಿ.ಎಂ ಸತ್ಯನಾರಾಯಣ, ವಾರ್ಡ್ ನಂ. ೭, ೮ ಮತ್ತು ೯ಕ್ಕೆ ಬಿ.ಸಿ ಸುರೇಶ್, ವಾರ್ಡ್ ನಂ. ೧೦, ೧೧ ಮತ್ತು ೧೨ಕ್ಕೆ ಶಿವಕುಮಾರ್ ಬೀರಣ್ಣನವರ್, ವಾರ್ಡ್ ನಂ. ೧೩, ೧೪ ಮತ್ತು ೧೫ಕ್ಕೆ ಸಚಿನ್, ವಾರ್ಡ್ ನಂ. ೧೬, ೧೭, ೧೮ ಮತ್ತು ೧೯ಕ್ಕೆ ಗಣೇಶ್‌ರಾಜ್. ಡಿ, ವಾರ್ಡ್ ನಂ. ೨೦, ೨೧, ೨೨ ಮತ್ತು ೨೩ಕ್ಕೆ ಎನ್.ಎಸ್ ಜಗದೀಶ್ವರಪ್ಪ, ವಾರ್ಡ್ ನಂ. ೨೪, ೨೫ ಮತ್ತು ೨೬ಕ್ಕೆ ಸುರೇಶ್, ವಾರ್ಡ್ ನಂ. ೨೭, ೨೮, ೨೯ ಮತ್ತು ೩೦ಕ್ಕೆ ಪ್ರದೀಪ್‌ಕುಮಾರ್, ವಾರ್ಡ್ ನಂ. ೩೧, ೩೨ ಮತ್ತು ೩೩ಕ್ಕೆ ವೆಂಕಟೇಶ್ ಹಾಗು ವಾರ್ಡ್ ನಂ. ೩೪ ಮತ್ತು ೩೫ಕ್ಕೆ ಮಹಾವೀರ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಹಾಗು ಚುನಾವಣಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚುನಾವಣಾ ಅಂತಿಮ ಕಣದಲ್ಲಿ ಒಟ್ಟು ೧೭೩ ಅಭ್ಯರ್ಥಿಗಳು:
ಕಾಂಗ್ರೆಸ್-೩೫, ಜೆಡಿಎಸ್-೩೫ ಮತ್ತು ಬಿಜೆಪಿ-೩೪, ಎಎಪಿ-೭, ಎಸ್‌ಡಿಪಿಐ-೩, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨ ಹಾಗು ೫೫ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೧೭೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಕ್ರಮ ಬದ್ಧವಾದ ೧೯೫ ನಾಮಪತ್ರಗಳ ಪೈಕಿ ಓರ್ವ ಅಧಿಕೃತ ಬಿಜೆಪಿ ಅಭ್ಯರ್ಥಿ ಸೇರಿದಂತೆ ಒಟ್ಟು ೨೨ ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
೨೯ನೇ ವಾರ್ಡ್ ಮಹಿಳಾ ಅಭ್ಯರ್ಥಿ ನಿಧನ :
ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ವಾರ್ಡ್ ನಂ. ೨೯ರಲ್ಲಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೃತಿ ಮಂಜುನಾಥ್ ಸೋಮವಾರ ನಿಧನ ಹೊಂದಿದ್ದಾರೆ.
ಕಳೆದ ಸುಮಾರು ೧ ವಾರದಿಂದ ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶೃತಿ ಮಂಜುನಾಥ್ ತುರ್ತು ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭದ್ರಾವತಿ ನಗರಸಭೆ ೨೯ನೇ ವಾರ್ಡಿನ ಅಧಿಕೃತಿ ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಸೋಮವಾರ ನಿಧನ ಹೊಂದಿದರು.
No comments:
Post a Comment