ಭದ್ರಾವತಿ ಜೈ ಭೀಮಾ ನಗರದಲ್ಲಿ ಮಂಗಳವಾರ ಸಂಜೆ ನಡೆದಿರುವ ನಗರಸಭೆ ಗುತ್ತಿಗ ನೌಕರ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ೫ ಜನರನ್ನು ಬಂಧಿಸಿರುವುದು.
ಭದ್ರಾವತಿ, ಮೇ. ೨೬: ಇಲ್ಲಿನ ಜೈ ಭೀಮಾ ನಗರದಲ್ಲಿ ಮಂಗಳವಾರ ಸಂಜೆ ನಡೆದಿರುವ ನಗರಸಭೆ ಗುತ್ತಿಗ ನೌಕರ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ೫ ಜನರನ್ನು ಬಂಧಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲೂ ಪೊಲೀಸರು ಕೊಲೆಯಾದ ೨೪ ಗಂಟೆಯೊಳಗೆ ಮುಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಅನ್ವರ್ ಕಾಲೋನಿ ನಿವಾಸಿ ಸಾಬೀತ್(೨೦), ಶಿವಮೊಗ್ಗ ಆರ್.ಎಂ.ಎಲ್ ನಗರದ ಇದಾಯತ್(೨೦), ಮಹಮದ್ ಜುನೇದ್(೨೦), ಬುದ್ದಾ ನಗರದ ನಿಶಾದ್ ಪಾಷಾ(೨೧) ಮತ್ತು ತಬ್ರೇಜ್ ಪಾಷಾ(೨೧) ಅವರನ್ನು ಬಂಧಿಸಲಾಗಿದೆ ಹಾಗು ಕೃತಕ್ಕೆ ಬಳಸಿದ ಆಯುಧ ಮತ್ತು ೨ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
No comments:
Post a Comment