ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಎರಡು ಗ್ರಾಮಗಳನ್ನು ಜೂ.೧೪ರ ವರೆಗೆ ಸೀಲ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಗ್ರಾಮದ ರಸ್ತೆಗಳು ಬಿಕೋ ಎನ್ನುತ್ತಿರುವುದು.
ಭದ್ರಾವತಿ, ಜೂ. ೧೦: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಎರಡು ಗ್ರಾಮಗಳನ್ನು ಜೂ.೧೪ರ ವರೆಗೆ ಸೀಲ್‌ಡೌನ್ ಮಾಡಲಾಗಿದೆ.
ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಈ ಎರಡು ಗ್ರಾಮಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯ ಪಡೆ ಸಭೆಯಲ್ಲಿ ಸೀಲ್‌ಡೌನ್ ಮಾಡಲು ತೀರ್ಮಾನಿಸಲಾಯಿತು.
ಗ್ರಾಮದಲ್ಲಿ ದಿನಸಿ ಹಾಗು ಮಾಸದಂಗಡಿಗಳಲ್ಲಿ ಬೆಳಿಗ್ಗೆ ೬ ರಿಂದ ೮ ಗಂಟೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್ ಸೇರಿದಂತೆ ಯಾವುದೇ ಅಂಗಡಿಮುಂಗಟ್ಟುಗಳು ತೆರೆಯುವಂತಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಾಸ್ಕ್ ಧರಿಸದೆ ಸಂಚರಿಸುವವರಿಗೆ ೧೦೦ ರು. ದಂಡ ವಿಧಿಸಲಿದೆ.
No comments:
Post a Comment