Sunday, August 8, 2021

ಪ್ರೇಕ್ಷಕರ ಮನ ಸೂರೆಗೊಂಡ ‘ರಸ ರಾಮಾಯಣ

ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
     ಭದ್ರಾವತಿ, ಆ. ೮:  ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
    ಗಾಯನಕ್ಕೆ ತಕ್ಕಂತೆ ಭಾವಾಭಿನಯ, ವ್ಯಾಖ್ಯಾನ ಇವೆರಡರ ನಡುವೆ ಆಕರ್ಷಕ ಚಿತ್ರಣ ಕಲಾವಿದರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿ ಕಂಡು ಬಂದವು. ಕೋವಿಡ್-೧೯ರ ನಡುವೆಯೂ ಅದ್ಭುತವಾದ ಕಾರ್ಯಕ್ರಮ ಆಯೋಜಿಸುವಲ್ಲಿ ವೇದಿಕೆ ಶ್ರಮ ಹೆಚ್ಚಿನದ್ದಾಗಿದ್ದು,  ಹಲವಾರು ವರ್ಷಗಳಿಂದ ನಿರಂತರವಾಗಿ ವಿಭಿನ್ನವಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಿದ್ದರು.
     ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ, ಮುನಿರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸುಬ್ಬರಾಯ ಭಾಗ್ವತ ಕಪ್ಪೆಕೆರೆ-ಯಕ್ಷ ಧ್ವನಿ, ಶಿವರಾಮ ಭಾಗ್ವತ ಕನಕನಹಳ್ಳಿ-ಗಾನಧ್ವನಿ, ಮಂಜುನಾಥ-ಕಂಚಿಮನೆ ಮೃದಂಗ, ಎನ್.ಜಿ ಹೆಗಡೆ ಕಪ್ಪೆಕೆರೆ-ತಬಲ, ಚಂದ್ರಶೇಖರ ಭಂಡಾರಿ-ಕೀಬೋರ್ಡ್, ನಿರ್ಮಲಾ ಗೋಳಿಕೊಪ್ಪ-ಭಾವಾಭಿನಯ, ಯತೀಶ್ ಯಲ್ಲಾಪುರ-ಚಿತ್ರ ಮತ್ತು ಡಾ. ಡಿ.ಕೆ ಗಾಂವ್ಕರ-ವ್ಯಾಖ್ಯಾನ ಎಲ್ಲಾ ಕಲಾವಿದರಿಂದ ಅದ್ಭುತ ಪ್ರತಿಭೆ ಅನಾವರಣಗೊಂಡಿತು. ಮಹಾಬಲೇಶ್ವರ ಹೆಗಡೆ ಕಪ್ಪೆಕೆರೆ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

No comments:

Post a Comment