ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 'ಅಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಗಾಂಧಿ ಜಯಂತಿ ಮತ್ತು ʻಲೋಕ್ ಅದಾಲತ್ʼ ಉಪಯೋಗಗಳ ಕುರಿತ ಕಾರ್ಯಕ್ರಮವನ್ನು ಜೆಎಂಎಫ್‌ಸಿ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಈ ಬಣಕಾರ ಉದ್ಘಾಟಿಸಿದರು.
ಭದ್ರಾವತಿ, ಅ. ೪: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ 'ಅಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಗಾಂಧಿ ಜಯಂತಿ ಮತ್ತು ʻಲೋಕ್ ಅದಾಲತ್ʼ ಉಪಯೋಗಗಳ ಕುರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಗರದ ಜೆಎಂಎಫ್‌ಸಿ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಈ ಬಣಕಾರ ಉದ್ಘಾಟಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ವೈ. ಜಯರಾಂ, ಕಲ್ಲಹಳ್ಳಿ ಶೈಕ್ಷಣಿಕ ಮಾರ್ಗದರ್ಶಕ ಶೇಖರಪ್ಪ, ನಗರಸಭಾ ಸದಸ್ಯ ಸೈಯದ್ ರಿಯಾಜ್, ಎಸ್.ಡಿ.ಎಸ್.ಸಿ ಕಾರ್ಯಾಧ್ಯಕ್ಷ ರಾಜು ಎಸ್. ರಾಯ್ಕರ್ ಮತ್ತು ಸದಸ್ಯ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲೋಕ್ ಆದಾಲತ್ ಪ್ರಯೋಜನಗಳನ್ನು ವಿವರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಆಋ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ವಿ. ವರ್ಷಾ ಪ್ರಾರ್ಥಿಸಿದರು. ಡಿ. ಮುರುಳೀಧರ ಸ್ವಾಗತಿಸಿ ಎಚ್.ಎಸ್ ಶಕುಂತಲ ನಿರೂಪಿಸಿದರು. ಎಸ್.ಕೆ ಗೀತಾ ವಂದಿಸಿದರು.
No comments:
Post a Comment