ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿಯವರ ೭೦ನೇ ವರ್ಷದ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೧೨: ನಡೆ, ನುಡಿ ಹಾಗು ಕ್ರಿಯಾಶೀಲತೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಎಲ್ಲೆಡೆ ಗುರುತಿಸಲ್ಪಡುವಂತೆ ಮಾಡುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಹೇಳಿದರು.
ಅವರು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿಯವರ ೭೦ನೇ ವರ್ಷದ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸತ್ಯಮೂರ್ತಿಯವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಪರಿಷತ್‌ನಲ್ಲಿ ಇಂದಿಗೂ ಕ್ರಿಯಾಶೀಲರಾಗಿರುವುದು ಅವರಲ್ಲಿನ ವಿಶೇಷ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ನಡೆ, ನುಡಿ ಸಹ ಎಲ್ಲರಿಗೂ ಮಾದರಿಯಾಗಿದೆ. ಇಂತಹ ವ್ಯಕ್ತಿಯ ಜನ್ಮದಿನವನ್ನು ಪರಿಷತ್ ತಾಲೂಕು ಮಾಜಿ ಅಧ್ಯಕ್ಷರಾದ ಅಪೇಕ್ಷ ಮಂಜುನಾಥ್‌ರವರು ವಿಶೇಷವಾಗಿ ಆಚರಣೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಅಪೇಕ್ಷ ನೃತ್ಯ ಕಲಾವೃಂದ ಸೇರಿದಂತೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಪರಿಷತ್ ಪ್ರಮುಖರಾದ ಅಪೇಕ್ಷ ಮಂಜುನಾಥ್, ಸಿ. ಚನ್ನಪ್ಪ, ಡಾ.ಬಿ.ಎಂ ನಾಸೀರ್‌ಖಾನ್, ವೈ.ಕೆ ಹನುಮಂತಯ್ಯ, ಅರಳೇಹಳ್ಳಿ ಅಣ್ಣಪ್ಪ, ಕತ್ತಲಗೆರೆ ತಿಮ್ಮಪ್ಪ, ಜೆ.ಎನ್ ಬಸವರಾಜಪ್ಪ, ಎನ್. ಮಂಜುನಾಥ್, ಸಿದ್ದಪ್ಪ, ಕುಮಾರ್, ಎ. ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಮಿಳು ಸಮಾಜದ ಪ್ರಮುಖರಾದ ಸುರೇಶ್‌ಕುಮಾರ್, ವೀರಭದ್ರನ್, ನಾರಾಯಣ, ಚಂದ್ರಶೇಖರ್, ವಿ. ಮಣಿ, ಮುತ್ತುಸ್ವಾಮಿ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್, ರೈಫಲ್ ಅಸೋಸಿಯೇಷನ್ ರವಿ, ಡಿಎಸ್‌ಎಸ್ ಪ್ರಮುಖರಾದ ರವಿನಾಯ್ಕ, ಶಿವುನಾಯ್ಕ ಹಾಗೂ ಜಿ.ಎನ್ ಸತ್ಯಮೂರ್ತಿಯವರ ಕುಟುಂಬ ವರ್ಗದವರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment