ಭದ್ರಾವತಿ ಹಳೇಸಂತೆಮೈದಾನ ಚಾನಲ್ ಏರಿಯಾ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಏ. ೨೬: ನಗರದ ಹಳೇಸಂತೆಮೈದಾನ ಚಾನಲ್ ಏರಿಯಾ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
ಶ್ರೀ ಮಹಾಗಣಪತಿಗೆ ಪಂಚಾಮೃತ ಅಭಿಷೇಕ, ಕಲಾವೃದ್ದಿ ಹೋಮ, ಅಷ್ಟದ್ರವ್ಯ ಸಹಿತ ಮಹಾಗಣಪತಿ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಈ ದೇವಸ್ಥಾನವನ್ನು ಮಹಿಳೆಯರು ಮುನ್ನಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ದೇವಸ್ಥಾನ ಕಮಿಟಿ ಪ್ರಮುಖರಾದ ಗೌರವಾಧ್ಯಕ್ಷೆ ಪ್ರಿಯಾಂಕ ಗಣೇಶ್, ಅಧ್ಯಕ್ಷೆ ಜಯಲಕ್ಷ್ಮೀ ಎಸ್. ನಾಗರಾಜ್‌ರಾವ್, ಉಪಾಧ್ಯಕ್ಷೆ ಶ್ವೇತ ಟಿ.ಎಸ್ ಯತೀಶ್ ರಾಜ್ .ಬಿ, ಕಾರ್ಯದರ್ಶಿ ವರಲಕ್ಷ್ಮೀ ಎಂ. ನಾಗರಾಜ್ .ಡಿ, ಸಹಕಾರ್ಯದರ್ಶಿ ಲತಾ ಎಂ.ಎಚ್ ತಿಪ್ಪೇಸ್ವಾಮಿ, ಖಜಾಂಚಿ ವಾಣಿ ವಿ.ಎಂ ಕುಮಾರಸ್ವಾಮಿ, ಕಾರ್ಯಕಾರಿಣಿ ಸದಸ್ಯೆಯರಾದ ಶಿವಕುಮಾರಿ ಡಿ.ಎನ್ ರಂಗಪ್ಪ, ವಿಜಯಲಕ್ಷ್ಮಿ ಆರ್. ಸುಬ್ರಮಣಿ, ಕೌಶಲ್ಯ ಡಿ. ಮೂರ್ತಿ, ರೂಪ ರಾಘವೇಂದ್ರ, ಆಶಾ ರವಿರಾಯ್ಕರ್ ಇನ್ನಿತರರು ಉಪಸ್ಥಿತರಿದ್ದರು.
ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷ್ಮಿ, ಮುಖಂಡರಾದ ಚೌಡಪ್ಪ, ಎಚ್.ಆರ್ ರಂಗನಾಥ್, ಜಂಬೂಸ್ವಾಮಿ, ಕಮಲಕುಮಾರಿ ಸೇರಿದಂತೆ ಹೊಸಮನೆ, ಕೇಶವಪುರ, ಗಾಂಧಿನಗರ, ಭೂತನಗುಡಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು.
No comments:
Post a Comment