ಉಡುಪಿ ಮದಗ ಅತ್ರಾಡಿಯಲ್ಲಿ ಕೊಲೆಯಾಗಿರುವ ಚೆಲುವಿ ಹಾಗು ಈಕೆಯ ಮಗಳು ಪ್ರಿಯಾ.
ಭದ್ರಾವತಿ, ಮೇ. ೧೨: ತಾಯಿ-ಮಗಳು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಹಿರಿಯಡ್ಕ ಪೊಲೀಸರು ಇಲ್ಲಿನ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ವ್ಯಕ್ತಿಯೋರ್ವನನ್ನು ಬಂಧಿಸಿರುವುದು ತಿಳಿದು ಬಂದಿದೆ.
ಉಡುಪಿ ತಾಲೂಕಿನ ಮದಗ ಅತ್ರಾಡಿ ಗ್ರಾಮದಲ್ಲಿ ಚೆಲುವಿ ಎಂಬ ಗೃಹಿಣಿ ಹಾಗು ಈಕೆಯ ೧೦ ವರ್ಷದ ಮಗಳು ಪ್ರಿಯಾಳನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ದೇವಿ ಎಂಬುವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಪ್ರಕರಣ ಭೇದಿಸಿದ್ದು, ಕೊಲೆಯಾದ ಚೆಲುವಿಯ ಸಂಬಂಧಿ ಬೊಮ್ಮನಕಟ್ಟೆ ನಿವಾಸಿ ಹರೀಶ್ ಅಲಿಯಾಸ್ ಗಣೇಶ್ ಎಂಬಾತನನ್ನು ಬಂದಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಘಟನೆ ವಿವರ:
ಚೆಲುವಿ ಸುಮಾರು ೧೫ ವರ್ಷದ ಹಿಂದೆ ಸುಬ್ರಮಣ್ಯ ಎಂಬಾತನೊಂದಿಗೆ ಮದುವೆಯಾಗಿದ್ದು, ಈ ಸಂದರ್ಭದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಶೀದ್ ಎಂ ವ್ಯಕ್ತಿ ಪರಿಚಯವಾಗಿದೆ. ನಂತರದ ದಿನಗಳಲ್ಲಿ ಚೆಲುವಿ ಗಂಡನನ್ನು ಬಿಟ್ಟು ರಶೀದ್‌ನೊಂದಿಗೆ ಮುಂಬೈಗೆ ತೆರಳಿದ್ದು, ಅಲ್ಲಿ ಸುಮಾರು ೨ ವರ್ಷವಿದ್ದು, ಪುನಃ ಹಿಂದಿರುಗಿ ಕಾರ್ಕಳದಲ್ಲಿ ರಶೀದ್‌ನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ವೇಳೆ ಈಕೆಗೆ ಪ್ರೀತಿಮ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳು ಜನಿಸಿದ್ದಾರೆ. ನಂತರದ ದಿನಗಳಲ್ಲಿ ಚೆಲುವಿ ರಶೀದ್‌ನನ್ನು ಸಹ ಬಿಟ್ಟು ತನ್ನ ತಾಯಿ ಮನೆ ಮದಗ ಅತ್ರಾಡಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಈ ನಡುವೆ ಸಂಬಂಧಿ ಹರೀಶ್ ಈಕೆಯ ಮನೆಗೆ ಬಂದು ಹೋಗುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿ ತಾಯಿ ಮತ್ತು ಮಗಳ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.
No comments:
Post a Comment