ಜಿಲ್ಲಾ ಗೌರ್ನರ್ ಎಂ.ಜಿ ರಾಮಚಂದ್ರ ಮೂರ್ತಿರವರು ನಗರದ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಸಂದರ್ಭದಲ್ಲಿ ಪೌರ ಕಾರ್ಮಿಕ ಹನುಮಂತು, ಅತಿಹೆಚ್ಚಿನ ಶವ ಪರೀಕ್ಷೆ ನಡೆಸಿರುವ ಗೋವಿಂದಪ್ಪ, ಲ್ಯಾಬ್ ಟೆಕ್ನಿಷಿಯನ್ ವಿವನ್ ವಿಲ್ಸನ್ ಹಾಗೂ ಸರ್ಕಾರಿ ಆಸ್ಪತ್ರೆ ಅಡುಗೆ ಕಾರ್ಮಿಕ ಮರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಜೂ. ೧ : ಜಿಲ್ಲಾ ಗೌರ್ನರ್ ಎಂ.ಜಿ ರಾಮಚಂದ್ರ ಮೂರ್ತಿರವರು ನಗರದ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡುವ ಮೂಲಕ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಸುಮಾರು ೧೦೬ ಕಂಪ್ಯುಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿರುವ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಫ್ಲೆಕ್ಸ್ ಅನಾವರಣಗೊಳಿಸಲಾಯಿತು.
ಜಿಲ್ಲಾ ಗೌರ್ನರ್ ರವರು ಸಂಜೆ ರೋಟರಿ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಕ್ಲಬ್ ನ ಕಾರ್ಯ ಚಟುವಟಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೌರ ಕಾರ್ಮಿಕ ಹನುಮಂತು, ಅತಿಹೆಚ್ಚಿನ ಶವ ಪರೀಕ್ಷೆ ನಡೆಸಿರುವ ಗೋವಿಂದಪ್ಪ, ಲ್ಯಾಬ್ ಟೆಕ್ನಿಷಿಯನ್ ವಿವನ್ ವಿಲ್ಸನ್ ಹಾಗೂ ಸರ್ಕಾರಿ ಆಸ್ಪತ್ರೆ ಅಡುಗೆ ಕಾರ್ಮಿಕ ಮರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಅಧ್ಯಕ್ಷ ಆದರ್ಶ್ ಹಾಗೂ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment